ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಲಿಬಾನ್ 'ಹಿಟ್‌ಲಿಸ್ಟ್‌'ನಲ್ಲಿ ಶರೀಫ್-ಶಾಬಾಜ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನ್ 'ಹಿಟ್‌ಲಿಸ್ಟ್‌'ನಲ್ಲಿ ಶರೀಫ್-ಶಾಬಾಜ್
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಸಹೋದರ ಶಾಬಾಜ್ ಪಾಕ್ ತಾಲಿಬಾನ್‌ನ ವರಿಷ್ಠ ಬೈತುಲ್ಲಾ ಮೆಹ್ಸೂದ್‌ನ ಹಿಟ್‌ಲಿಸ್ಟ್‌ನಲ್ಲಿದ್ದು, ಮೆಹ್ಸೂದ್ ಬೇನಜೀರ್ ಭುಟ್ಟೋ ಹತ್ಯೆಯ ಪ್ರಮುಖ ರೂವಾರಿಯಾಗಿರುವುದಾಗಿ ಶನಿವಾರ ಮಾಧ್ಯಮದ ವರದಿಯೊಂದು ಆರೋಪಿಸಿದೆ.

ಇದೀಗ ತಾಲಿಬಾನ್ ವಿರೋಧಪಕ್ಷದ ನಾಯಕ, ಪಿಎಂಎಲ್-ಎನ್ ವರಿಷ್ಠ ನವಾಜ್ ಶರೀಫ್ ಹಾಗೂ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಾಬಾಜ್ ಅವರನ್ನು ಮುಖ್ಯಗರಿಯಾಗಿಸಿಕೊಂಡಿದೆ ಎಂದು ವರಿದಿ ತಿಳಿಸಿದೆ.

ಈಗಾಗಲೇ ಶರೀಫ್ ಸಹೋದರ ಶಾಬಾಜ್ ಅವರ ಎಲ್ಲಾ ಚಲನವಲನಗಳನ್ನು ಹದ್ದುಗಣ್ಣಿನಲ್ಲಿ ವೀಕ್ಷಿಸುವಂತೆ ತಾಲಿಬಾನ್ ಉಗ್ರಗಾಮಿ ಸಂಘಟನೆ ತನ್ನ ಆಪ್ತ ಸಹಾಯಕನೊಬ್ಬನನ್ನು ಲಾಹೋರ್ ನಗರಕ್ಕೆ ಕಳುಹಿಸಿರುವುದಾಗಿ ಹೇಳಿದೆ.

ಮೆಹ್ಸೂದ್ ತನ್ನ ಆಪ್ತನಾದ ಮೌಲ್ವಿ ಉಬೈದುಲ್ಲಾ ಎಂಬಾತನ್ನು ಕಳೆದ ಜುಲೈ ತಿಂಗಳಿನಲ್ಲಿಯೇ ಲಾಹೋರ್ ನಗರಕ್ಕೆ ಕಳುಹಿಸಿತ್ತು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೈಕಲ್ ರಿಕ್ಷಾದಲ್ಲಿ ಪರಾರಿಯಾಗಿದ್ದ ಕಫೀಲ್
ಸೊಮಾಲಿಯಾ: ಕಾಸರಗೋಡಿನ ಯುವಕ ಸಹಿತ ಭಾರತೀಯರ ಬಿಡುಗಡೆ
ಚೀನಾದೊಂದಿಗೆ ಅಣುಒಪ್ಪಂದವಿಲ್ಲ:ಪಾಕ್
ಅಣುಬಂಧಕ್ಕೆ ಭಾರತ-ಅಮೆರಿಕ ಅಂತಿಮ ಮುದ್ರೆ
ಶ್ರೀನಗರ:ಎನ್‌ಕೌಂಟರ್‌ಗೆ ಲಷ್ಕರ್ ಕಮಾಂಡರ್ ಬಲಿ
ಶೋಭರಾಜ್-ನಿಹಿತಾ ಮದುವೆ ನಡೆದಿಲ್ಲ: ನೇಪಾಳ