ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಿಕ್ಕಟ್ಟು:ಮುಗಾಬೆ ಪಕ್ಷಕ್ಕೆ ಪ್ರಮುಖ ಖಾತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಕ್ಕಟ್ಟು:ಮುಗಾಬೆ ಪಕ್ಷಕ್ಕೆ ಪ್ರಮುಖ ಖಾತೆ
ಆಫ್ರಿಕನ್ ರಾಷ್ಟ್ರವಾದ ಜಿಂಬಾಬ್ವೆ ಸದಾ ಒಂದಿಲ್ಲೊಂದು ಸಂಕಷ್ಟದಲ್ಲಿ ಸಿಲುಕಿಕೊಂಡೇ ಇರುತ್ತದೆ. ಇದೀಗ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಎಲ್ಲರ ವಿರೋಧಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸರ್ಕಾರದ ಅತಿ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಕ್ಕೆ ನೀಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಜಿಂಬಾಬ್ವೆಯ ಅಸ್ಥಿರ ರಾಜಕೀಯ ಮತ್ತು ಸಂಕಷ್ಟದ ಆರ್ಥಿಕತೆಗೆ ಅಂತ್ಯ ಹಾಡಲು ಜನು-ಪಿಎಫ್ ಮತ್ತು ಎಂಡಿಸಿ ಪಕ್ಷಗಳು ಪರಸ್ಪರ ಕೈಜೋಡಿಸಿ ಸರ್ಕಾರ ರಚಿಸಿದ್ದವು.

ಅಧ್ಯಕ್ಷ ಮುಗಾಬೆ ಅವರು ಜನು-ಪಿಫ್ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಪ್ರಧಾನಿ ಸ್ವಾಂಗಿರೈ ಅವರು ಎಂಡಿಸಿ ಪಕ್ಷದ ಅಭ್ಯರ್ಥಿ, ಸಂಪುಟದಲ್ಲಿ ಜನು-ಪಿಫ್ ಪಕ್ಷಕ್ಕೆ 13ಸೀಟುಗಳಿದ್ದರೆ, ಎಂಡಿಸಿ ಪಕ್ಷಕ್ಕೆ 13 ಹಾಗೂ ಎಂಡಿಸಿ ಪಕ್ಷದ ಭಿನ್ನಮತೀಯ ಗುಂಪಿಗೆ 3ಸ್ಥಾನಗಳಿವೆ.

ಮುಗಾಬೆ ಅತಿ ಪ್ರಮುಖ ಖಾತೆಗಳಾದ ರಕ್ಷಣಾ ಖಾತೆ,ಗೃಹ ಮತ್ತು ವಿತ್ತ ಖಾತೆಗಳನ್ನು ತಮ್ಮ ಪಕ್ಷಕ್ಕೆ ವಹಿಸಿ ಬಿಟ್ಟಿದ್ದಾರೆ. ಆದರೆ ಬೇರೆಯೇ ಲೆಕ್ಕಾಚಾರದಲ್ಲಿದ್ದ ಎಂಡಿಸಿ ಪಕ್ಷಕ್ಕೆ ಇದು ಸಹಿಸಲಾರದ ಕೋಪ ಉಂಟುಮಾಡಿದೆ.

ಮುಗಾಬೆಯವರ ಈ ನಿರ್ಧಾರ ರಾಜಕೀಯ ಒಪ್ಪಂದಕ್ಕೆ ಧಕ್ಕೆಯುಂಟಾಗಿದೆ ಈ ಪಕ್ಷವು ಜನತೆಯ ಇಚ್ಛೆಯನ್ನು ಬಲಿಕೊಟ್ಟಿದೆ ಎಂದು ಹೇಳಿರುವ ಎಂಡಿಸಿ ವಕ್ತಾರ ನೆಲ್ಸನ್ ಚಾಮಿಸಾ,ಇದಕ್ಕಾಗಿ ಅದು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಲಿಬಾನ್ 'ಹಿಟ್‌ಲಿಸ್ಟ್‌'ನಲ್ಲಿ ಶರೀಫ್-ಶಾಬಾಜ್
ಸೈಕಲ್ ರಿಕ್ಷಾದಲ್ಲಿ ಪರಾರಿಯಾಗಿದ್ದ ಕಫೀಲ್
ಸೊಮಾಲಿಯಾ: ಕಾಸರಗೋಡಿನ ಯುವಕ ಸಹಿತ ಭಾರತೀಯರ ಬಿಡುಗಡೆ
ಚೀನಾದೊಂದಿಗೆ ಅಣುಒಪ್ಪಂದವಿಲ್ಲ:ಪಾಕ್
ಅಣುಬಂಧಕ್ಕೆ ಭಾರತ-ಅಮೆರಿಕ ಅಂತಿಮ ಮುದ್ರೆ
ಶ್ರೀನಗರ:ಎನ್‌ಕೌಂಟರ್‌ಗೆ ಲಷ್ಕರ್ ಕಮಾಂಡರ್ ಬಲಿ