ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಉತ್ತರ ಇರಾಕ್‌ನಲ್ಲಿ ಟರ್ಕಿ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರ ಇರಾಕ್‌ನಲ್ಲಿ ಟರ್ಕಿ ದಾಳಿ
ಉತ್ತರ ಇರಾಕಿನಲ್ಲಿ ಅಡಗಿಕೊಂಡಿರುವ ಕುರ್ದಿಶ್ ಬಂಡುಕೋರರನ್ನು ಸದೆಬಡಿಯಲು ಟರ್ಕಿ ದೇಶದ ಯುದ್ಧ ವಿಮಾನಗಳು ಭಾನುವಾರ ತೀವ್ರ ದಾಳಿ ನಡೆಸಿದವು.

ಇರಾಕಿನ ಉತ್ತರ ಭಾಗದಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ನಮ್ಮ ಯುದ್ಧ ವಿಮಾನಗಳು ಯಶಸ್ವಿಯಾಗಿ ದಾಳಿ ನಡೆಸಿದವು. ಅನಂತರ ಆರ್ಟಿಲರಿ ಪಡೆಯು ಈ ಜಾಗಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿದವು ಎಂದು ಟರ್ಕಿ ಮಿಲಿಟರಿ ಹೇಳಿಕೊಂಡಿದೆ.

ಕಳೆದ ವಾರ ಕುರ್ದಿಶ್ ಬಂಡುಕೋರ ಉಗ್ರಗಾಮಿಗಳು ಗಡಿಭಾಗದಲ್ಲಿ 17 ಟರ್ಕಿ ಸೈನಿಕರನ್ನು ಕೊಂದ ನಂತರ ಟರ್ಕಿ ದೇಶ ಆಗಿನಿಂದ ಆರು ಬಾರಿ ಇರಾಕ್ ಗಡಿಯೊಳಗೆ ನುಗ್ಗಿ ಉಗ್ರಗಾಮಿಗಳ ಮೇಲೆ ಆಕ್ರಮಣ ಎಸಗಿದೆ.

ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿಗೆ (ಪಿಕೆಕೆ) ಸೇರಿದ ಈ ಉಗ್ರಗಾಮಿಗಳು ಟರ್ಕಿಯಲ್ಲಿ ಕುರ್ದಿಸ್ತಾನ ಪ್ರದೇಶದ ಸ್ವಾಯತ್ತತೆಗಾಗಿ ಹೋರಾಡುತ್ತಿದೆ. ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ಒಕ್ಕೂಟವು ಈ ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದು ಹಣೆಪಟ್ಟಿ ಕಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಕ್ಕಟ್ಟು:ಮುಗಾಬೆ ಪಕ್ಷಕ್ಕೆ ಪ್ರಮುಖ ಖಾತೆ
ತಾಲಿಬಾನ್ 'ಹಿಟ್‌ಲಿಸ್ಟ್‌'ನಲ್ಲಿ ಶರೀಫ್-ಶಾಬಾಜ್
ಸೈಕಲ್ ರಿಕ್ಷಾದಲ್ಲಿ ಪರಾರಿಯಾಗಿದ್ದ ಕಫೀಲ್
ಸೊಮಾಲಿಯಾ: ಕಾಸರಗೋಡಿನ ಯುವಕ ಸಹಿತ ಭಾರತೀಯರ ಬಿಡುಗಡೆ
ಚೀನಾದೊಂದಿಗೆ ಅಣುಒಪ್ಪಂದವಿಲ್ಲ:ಪಾಕ್
ಅಣುಬಂಧಕ್ಕೆ ಭಾರತ-ಅಮೆರಿಕ ಅಂತಿಮ ಮುದ್ರೆ