ಅಮೆರಿಕದ ಆರ್ಥಿಕ ತಜ್ಞ ಪೌಲ್ ಕ್ರಗ್‌ಮನ್ ಅವರು 2008ರ ಸಾಲಿನ ನೊಬೆಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಜಾಗತಿಕ ನಗರೀಕರಣದ ನೂತನ ಆರ್ಥಿಕ ಸಿದ್ದಾಂತವನ್ನು ರೂಪಿಸಿದ ಪೌಲ್ ಅವರಿಗೆ ಈ ಸಾಲಿನ ಆರ್ಥಿಕ ನೊಬೆಲ್ ಅನ್ನು ನೀಡಲಾಗಿದ್ದು, ಈ ಪ್ರತಿಷ್ಠಿತ ಪ್ರಶಸ್ತಿ 10ಮಿಲಿಯನ್(1.4ಮಿಲಿಯನ್ ಡಾಲರ್) ಮೊತ್ತವನ್ನು ಹೊಂದಿರುವುದಾಗಿ ರಾಯಲ್ ಸ್ವೀಡಿಸ್ ಆಕಾಡೆಮಿ ಆಫ್ ಸೈನ್ಸ್ ಸೋಮವಾರ ತಿಳಿಸಿದೆ.
ಈ ಮೊದಲು ಪೌಲ್ ಕ್ರಗ್‌ಮನ್ ಅವರು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಆರ್ಥಿಕ ಭೂಗೋಶಾಸ್ತ್ರದ ಕುರಿತು ಸಂಶೋಧನೆ ನಡೆಸಿರುವುದಾಗಿ ಸಮಿತಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಕ್ರಗ್‌ಮನ್ ಅವರು ಯುನೈಟೆಡ್ ಸ್ಟೇಟ್ಸ್‌ನ ಪ್ರಿನ್ಸ್‌ಟನ್ ಯೂನಿರ್ವಸಿಟಿಯಲ್ಲಿ ಆರ್ಥಿಕ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. |