ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮ ಬದುಕಿರುವುದೇ ಪವಾಡ: ಕ್ಯಾಸ್ಟ್ರೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ಬದುಕಿರುವುದೇ ಪವಾಡ: ಕ್ಯಾಸ್ಟ್ರೋ
ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಕಪ್ಪು ಜನಾಂಗದ ವ್ಯಕ್ತಿಯಾದ ಬರಾಕ್ ಒಬಾಮಾ ಅಮೆರಿಕ ಸಮಾಜದಲ್ಲಿ ಹತ್ಯೆಯಾಗದೆ ಉಳಿದಿರುವುದೇ ಒಂದು ದೊಡ್ಡ ಪವಾಡ ಎಂದು ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ವಿಪರೀತವಾಗಿರುವ ಜನಾಂಗೀಯ ವಿಷಯದಲ್ಲಿ ಕಪ್ಪು ಜನಾಂಗದ ವ್ಯಕ್ತಿಯಾಗಿರುವ ಬರಾಕ್ ಅವರು ಕೊಲೆಯಾಗದೇ ಉಳಿದಿರುವುದು ನಿಜಕ್ಕೂ ಒಂದು ಪವಾಡ ಎಂದು ಕ್ಯಾಸ್ಟ್ರೋ ಅವರು ಕ್ಯೂಬಾ ಡಿಬೇಟ್ ವೆಬ್‌ಸೈಟ್‌ನಲ್ಲಿ ಶನಿವಾರ ಬರೆದಿರುವುದಾಗಿ ವರದಿಯೊಂದು ತಿಳಿಸಿದೆ.

ಒಬ್ಬ ಕಪ್ಪು ಜನಾಂಗದ ವ್ಯಕ್ತಿಯಾಗಿರುವ ಬರಾಕ್ ಅವರು ತಮ್ಮ ಹೆಂಡತಿ, ಮಕ್ಕಳು ವೈಟ್ ಹೌಸ್‌‌ಗೆ ಹೋಗುವ ವಿಚಾರದಲ್ಲಿ ನಿಜಕ್ಕೂ ಕೋಟ್ಯಂತರ ಬಿಳಿ ಜನಾಂಗೀಯ ವ್ಯಕ್ತಿಗಳು ಯಾವುದೇ ಮೈತ್ರಿ ಮಾಡಿಕೊಳ್ಳಲಾರರು ಎಂದು ಫಿಡೆಲ್ ನೇರವಾಗಿ ಆರೋಪಿಸಿದ್ದಾರೆ.

ಆ ನಿಟ್ಟಿನಲ್ಲಿ ಬರಾಕ್ ಬದುಕುಳಿದಿರುವುದು ಪವಾಡವೇ ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ಅವರು, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಪ್ಪು ಜನಾಂಗದ ವ್ಯಕ್ತಿಯೊಬ್ಬ ಡೆಮೊಕ್ರಟಿಕ್ ಪಕ್ಷದಿಂದ ಆರಿಸಿ,ಅಧ್ಯಕ್ಷರಾಗಿ ಆಯ್ಕೆಯಾಗಿ ಬದುಕುಳಿಯುವುದು ಆಶ್ಚರ್ಯದ ಮಾತಾಗಿದೆ ಎಂದು ಹೇಳಿದ್ದಾರೆ.

ತೀವ್ರವಾಗಿ ಕರುಳು ಬೇನೆಯಿಂದ ಬಳುತ್ತಿದ್ದ ಫಿಡೆಲ್ ಕ್ಯಾಸ್ಟ್ರೋ ಅವರು ಇತ್ತೀಚೆಗಷ್ಟೇ ತಮ್ಮ ಸಹೋದರ ರೌಲ್‌ ಅವರನ್ನು ಕ್ಯೂಬಾ ಅಧ್ಯಕ್ಷ ಪಟ್ಟಕ್ಕೆ ಏರಿಸಿದ್ದರು. ಆ ಬಳಿಕ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ರಹಸ್ಯ ಸ್ಥಳದಲ್ಲಿರುವ ಅವರು ಪ್ರಥಮ ಬಾರಿಗೆ ಅಮೆರಿಕ ವಿರುದ್ಧ ಮತ್ತೆ ಹರಿಹಾಯ್ದು ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕದ ಆರ್ಥಿಕ ತಜ್ಞ ಪೌಲ್‌ಗೆ ನೊಬೆಲ್
ನಿಹಿತಾ ಈಗ ನಿಹಿತಾ ಶೋಭಾರಾಜ್ ಬಿಸ್ವಾಸ್ !
ಕರಾಚಿಯಲ್ಲಿ 4ಲಕ್ಷ ಶಸ್ತ್ರಾಸ್ತ್ರಧಾರಿ ಅಘ್ಘಾನ್‌‌ರಿದ್ದಾರೆ:ಹುಸೈನ್
ಮುಷರ್ರಫ್ ವಿರುದ್ಧ ತನಿಖೆಗೆ ನವಾಜ್ ಆಗ್ರಹ
ಉತ್ತರ ಇರಾಕ್‌ನಲ್ಲಿ ಟರ್ಕಿ ದಾಳಿ
ಬಿಕ್ಕಟ್ಟು:ಮುಗಾಬೆ ಪಕ್ಷಕ್ಕೆ ಪ್ರಮುಖ ಖಾತೆ