ಲಾಸ್‌ಏಂಜಲೀಸ್‌ನ ಎರಡು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಹೊತ್ತಿಕೊಂಡ ಕಾಳ್ಗಿಚ್ಚಿನಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮನೆಗಳು ಸುಟ್ಟು ಭಸ್ಮವಾಗಿದ್ದು, ಜನರನ್ನು ಬಲವಂತದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸ್ಯಾನ್ ಫೆರ್ನಾಂಡೋ ವ್ಯಾಲಿ ಪ್ರದೇಶದಲ್ಲಿನ ಸುಮಾರು 5,300ಎಕರೆ ಪ್ರದೇಶಕ್ಕೆ ಹೊತ್ತಿಕೊಂಡ ಕಾಳ್ಗಿಚ್ಚಿನ್ನು ನಂದಿಸಲು ಒಂದು ಸಾವಿರಕ್ಕೂ ಅಧಿಕ ಮಂದಿ ಅಗ್ನಿಶಾಮಕ ಸಿಬ್ಬಂದಿಗಳು, ಒಂಬತ್ತು ನೀರು ಸಿಂಪರಣೆಯ ಹೆಲಿಕ್ಯಾಪ್ಟರ್‌ನೊಂದಿಗೆ ಅವಿರತವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಪೋರ್ಟರ್ ರಾಂಚ್ ಪ್ರದೇಶದ ಸುಮಾರು 3ಸಾವಿರ ಎಕರೆ ಪ್ರದೇಶಕ್ಕೂ ಕಾಳ್ಗಿಚ್ಚು ಹೊತ್ತಿಕೊಂಡಿದ್ದು, ಎರಡು ಸ್ಥಳಗಳಲ್ಲೂ ಅಗ್ನಿಶಾಮಕ ಸಿಬ್ಬಂದಿಗಳು ಅಗ್ನಿ ಶಮಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಈ ಅಗ್ನಿ ಆಕಸ್ಮಿಕಕ್ಕೆ ಸುಮಾರು 35ಕ್ಕೂ ಅಧಿಕ ಮನೆಗಳು ಭಸ್ಮವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ. |