ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ ಪರೀಕ್ಷಕರ ಮೇಲಿನ ನಿಷೇಧ ವಾಪಸ್:ದ.ಕೊರಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಪರೀಕ್ಷಕರ ಮೇಲಿನ ನಿಷೇಧ ವಾಪಸ್:ದ.ಕೊರಿಯಾ
ಕಮ್ಯೂನಿಷ್ಟ್ ದೇಶಗಳು ಭಯೋತ್ಪಾದಕ ಪ್ರಾಯೋಜಿತ ದೇಶಗಳು ಎಂಬ ಪಟ್ಟಿಯಿಂದ ಅಮೆರಿಕ ಕೈಬಿಟ್ಟ ಬೆನ್ನಲ್ಲೇ, ಇದೀಗ ಅಮೆರಿಕದ ಪ್ಲುಟೋನಿಯಂ ಪ್ಲ್ಯಾಂಟ್ ವೀಕ್ಷಕರ ಮೇಲೆ ಹೇರಿದ್ದ ನಿಷೇಧವನ್ನು ಉತ್ತರ ಕೊರಿಯಾ ವಾಪಸ್ ತೆಗೆದುಕೊಂಡಿದೆ.

ಈ ಸಂಬಂಧವಾಗಿ ಎರಡೂ ದೇಶಗಳು ಸೌಹಾರ್ದಯುತ ಒಪ್ಪಂದದ ಸಮೀಪಕ್ಕೆ ಬಂದಿರುವುದಾಗಿ ಹೇಳಿದೆ. ದೇಶದಲ್ಲಿದ್ದ ಪ್ಲುಟೋನಿಯಂ ಪ್ಲ್ಯಾಂಟ್ ವೀಕ್ಷಕರ ಆಗಮನಕ್ಕೆ ಉತ್ತರ ಕೊರಿಯಾ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡ ಬಳಿಕ, ಯಾಂಗ್ಯಾಂಗ್ ಮತ್ತು ವಾಷಿಂಗ್ಟನ್ ನಡುವೆ ಒಪ್ಪಂದ ಏರ್ಪಟ್ಟಿದೆ.

ಆ ನಿಟ್ಟಿನಲ್ಲಿ ಉತ್ತರ ಕೊರಿಯಾದ ಯಾಂಗ್ಯಾಂಗ್‌ನಲ್ಲಿರುವ ಪ್ಲುಟೋನಿಯಂ ಘಟಕವನ್ನು ಪರಿಶೀಲಿಸಲು ಅಮೆರಿಕಕ್ಕೆ ಅನುಮತಿ ದೊರೆತಂತಾಗಿದೆ.

ಈ ಒಪ್ಪಂದವನ್ನು ಸ್ವಾಗತಿಸಿರುವುದಾಗಿ ಅಮೆರಿಕ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಮ್ಮ ಸಂಬಂಧವನ್ನು ಪುನರ್ ಆರಂಭಿಸುವ ಕುರಿತು ಆರು ಪಕ್ಷಗಳ ಜೊತೆಗಿನ ಮಾತುಕತೆಯನ್ನು ಮಾನ್ಯ ಮಾಡುವುದಾಗಿ ಹೇಳಿದರು.

ಪರಮಾಣುಯೇತರ ಕೊರಿಯಾ ದೇಶವಾಗುವ ನಿಟ್ಟಿನಲ್ಲಿ ಇದೊಂದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾಸ್‌‌ಏಂಜಲೀಸ್: ಕಾಳ್ಗಿಚ್ಚಿಗೆ ಇಬ್ಬರು ಬಲಿ
ಒಬಾಮ ಬದುಕಿರುವುದೇ ಪವಾಡ: ಕ್ಯಾಸ್ಟ್ರೋ
ಅಮೆರಿಕದ ಆರ್ಥಿಕ ತಜ್ಞ ಪೌಲ್‌ಗೆ ನೊಬೆಲ್
ನಿಹಿತಾ ಈಗ ನಿಹಿತಾ ಶೋಭಾರಾಜ್ ಬಿಸ್ವಾಸ್ !
ಕರಾಚಿಯಲ್ಲಿ 4ಲಕ್ಷ ಶಸ್ತ್ರಾಸ್ತ್ರಧಾರಿ ಅಘ್ಘಾನ್‌‌ರಿದ್ದಾರೆ:ಹುಸೈನ್
ಮುಷರ್ರಫ್ ವಿರುದ್ಧ ತನಿಖೆಗೆ ನವಾಜ್ ಆಗ್ರಹ