ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಬಾಂಬ್ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್‌ಐ ಕೈವಾಡ ಇದೆ ಎನ್ನುವ ಆರೋಪ ಹುರುಳಿಲ್ಲದ್ದು ಎಂದು ಪಾಕಿಸ್ತಾನ್ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಮಾಹ್‌ಮುದ್ ಅಲಿ ದುರ್ರಾನಿ ಮಂಗಳವಾರ ತಿಳಿಸಿದ್ದಾರೆ.
ಭಾರತೀಯ ರಾಯಭಾರಿ ಕಚೇರಿ ಮೇಲಿನ ಭಯೋತ್ಪಾದನಾ ದಾಳಿಯ ಹಿಂದೆ ಪಾಕ್‌ನ ಗುಪ್ತಚರ ಇಲಾಖೆಯ ಕೈವಾಡ ಇದೆ ಎಂಬ ಆರೋಪ ಸುಳ್ಳು ಎಂದು ಅವರು ಸ್ಷಷ್ಟನೆ ನೀಡಿದ್ದಾರೆ.
ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರೊಂದಿಗೆ ಇಲ್ಲಿ ಮಾತುಕತೆ ನಡೆಸಿದ ಬಳಿಕ, ದುರ್ರಾನಿಯವರು ಈ ಹೇಳಿಕೆಯನ್ನು ನೀಡಿದ್ದಾರೆ.
ಜುಲೈ ತಿಂಗಳಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಐಎಸ್‌ಐ ಕೈವಾಡ ಇರುವುದರ ಬಗ್ಗೆ ಸಾಕ್ಷ್ಯಾಧಾರಗಳಿವೆ ಎಂದು ಗಂಭೀರವಾಗಿ ಎಂ.ಕೆ.ನಾರಾಯಣನ್ ಅವರು ಆರೋಪಿಸಿದ ಬೆನ್ನಲ್ಲೇ ಪಾಕ್ ಎನ್‌ಎಸ್‌ಎ ಈ ಪ್ರತಿಕ್ರಿಯೆ ನೀಡಿದೆ.
ಜುಲೈ 17ರಂದು ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 58ಮಂದಿ ಬಲಿಯಾಗಿದ್ದು, 140ಮಂದಿ ಗಾಯಗೊಂಡಿದ್ದರು. ಇದರಲ್ಲಿ ಬ್ರಿಗೇಡಿಯರ್ ರವಿ ದತ್ತ ಮೆಹ್ತಾ,ಐಎಫ್‌ಎಸ್ ಅಧಿಕಾರಿ ವಿ.ವೆಂಕಟೇಶ್ವರ್ ಮತ್ತು ಇಬ್ಬರು ಐಟಿಬಿಪಿ ಸಿಬ್ಬಂದಿಗಳು ಸಾವನ್ನಪ್ಪಿದ್ದರು.
|