ಪಾಕ್‌ನ ಸರ್ವಾಧಿಕಾರಿಯಾಗಿ ಒಂಬತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇದೀಗ ಅಧಿಕಾರದ ಗದ್ದಗೆಯಿಂದ ಕೆಳಗಿಳಿದ ನಂತರ ತುಂಬಾ ಬ್ಯುಸಿಯಾಗಿದ್ದು, ಟೆನ್ನಿಸ್ ಆಟದಲ್ಲಿ ನಿರತರಾಗಿದ್ದಾರಂತೆ.ದಿನವಿಡೀ ಬ್ಯುಸಿಯಾಗಿರುವ ಮುಷ್ ಅವರು ಹಲವಾರು ಜನರೊಂದಿಗೆ ಮಾತುಕತೆ,ಟೆನ್ನಿಸ್,ಸ್ಕ್ಯಾಶ್ ಆಟಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿಕೊಂಡಿದ್ದಾರಂತೆ. ಅಲ್ಲದೇ ಈಗಾಗಲೇ ವಿದೇಶಗಳಲ್ಲಿ ಉಪನ್ಯಾಸ ನೀಡಲು ಹಲವಾರು ಆಹ್ವಾನಗಳು ಬಂದಿವೆಯಂತೆ !ಆದರೆ ಅದ್ಯಾವುದಕ್ಕೂ ಸ್ಪಷ್ಟ ಉತ್ತರ ನೀಡವನ್ನು ಮುಷ್ ನೀಡಿಲ್ಲ ಎಂದು ಮುಷ್ ಅವರ ಐದು ಎಕರೆ ಫಾರ್ಮ್ ಹೌಸ್ ಆರ್ಕಿಟೆಕ್ಟ್ ಹಮ್ಮಾದ್ ಹುಸೈನ್ ತಿಳಿಸಿದ್ದಾರೆ.ಏತನ್ಮಧ್ಯೆ ಮುಷರ್ರಫ್ ಅವರ ಹಾಸ್ಯ ಪ್ರವೃತ್ತಿಯಲ್ಲಾಗಲಿ, ಶೈಲಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದಾಗಿ ಯುವ ಆರ್ಕಿಟೆಕ್ಟ್ ಹುಸೈನ್ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ದಿ ನ್ಯೂಸ್ ವರದಿ ಹೇಳಿದೆ.ಈಗಾಗಲೇ ಮುಷ್ ಅವರ ಕನಸಿನ ಫಾರ್ಮ್ ಹೌಸ್ ಬಹುತೇಕ ಪೂರ್ಣಗೊಂಡಿದ್ದು,ಅವರು ಮುಂದಿನ ತಿಂಗಳು ಫಾರ್ಮ್ ಹೌಸ್‌ಗೆ ಸ್ಥಳಾಂತರಗೊಳ್ಳಲಿದ್ದಾರೆ. ಇದು ಸುಮಾರು ಐದು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದ್ದು,ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಹುಸೈನ್ ತಿಳಿಸಿದ್ದಾರೆ.ಈ ಐದು ಎಕರೆ ಪ್ರದೇಶದಲ್ಲಿ ಮುಷರ್ರಫ್ ಅವರ ಸುಮಾರು 10 ಸಾವಿರ ಚದರ ಅಡಿಯ ನೂತನ ಮನೆಯೂ ನಿರ್ಮಾಣಗೊಳ್ಳುತ್ತಿದ್ದು, ಇದರಲ್ಲಿ ಹಲವಾರು ವಿಶೇಷತೆಗಳು ಇರುವುದಾಗಿ ಅವರು ವಿವರಿಸಿದ್ದಾರೆ.ಮುಷರ್ರಫ್ ಅವರನ್ನು ಪ್ರತಿದಿನವೂ ಹಲವಾರು ಮಂದಿ ಭೇಟಿಯಾಗಲು ಆಗಮಿಸುತ್ತಿರುವುದರಿಂದ ಅವರು ತುಂಬಾ ಬ್ಯುಸಿಯಂತೆ, ಅವರ ಮನೆಗೆ ನಿವೃತ್ತಿ ಹೊಂದಿದ ಆರ್ಮಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ರಾವಲ್ಪಿಂಡಿಯಲ್ಲಿರುವ ಮಾಜಿ ಆರ್ಮಿ ಅಧ್ಯಕ್ಷರ ಮನೆಗೆ ಬರುತ್ತಿರುವುದಾಗಿ ಹುಸೈನ್ ಹೇಳಿದ್ದಾರೆ. |
|