ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಂಬ್ ಬ್ಲಾಸ್ಟ್ ಪ್ರಕರಣ:8 ಬೌದ್ಧಭಿಕ್ಷುಗಳಿಗೆ ಶಿಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಬ್ ಬ್ಲಾಸ್ಟ್ ಪ್ರಕರಣ:8 ಬೌದ್ಧಭಿಕ್ಷುಗಳಿಗೆ ಶಿಕ್ಷೆ
ಸರ್ಕಾರಿ ವಿರೋಧಿ ಧೋರಣೆ ಮೂಲಕ ಪ್ರತಿಭಟನೆ ನಡೆಸಿ,ಟಿಬೆಟ್‌ನಲ್ಲಿನ ಸರ್ಕಾರಿ ಕಟ್ಟಡಕ್ಕೆ ಬಾಂಬ್ ದಾಳಿ ಪ್ರಕರಣದ ಆರೋಪದಲ್ಲಿ ಎಂಟು ಮಂದಿ ಬೌದ್ಧ ಭಿಕ್ಷುಗಳನ್ನು ದೋಷಿ ಎಂದು ನ್ಯಾಯಾಧೀಶರು ಮಂಗಳವಾರ ತೀರ್ಪು ನೀಡಿ,ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಚಾಮ್ಡೋದ ಪೀಪಲ್ಸ್ ನ್ಯಾಯಾಲಯ ಎಂಟು ಮಂದಿ ಬೌದ್ಧ ಭಿಕ್ಷುಗಳನ್ನು ದೋಷಿತರು ಎಂದು ತೀರ್ಪು ನೀಡಿರುವುದಾಗಿ ಹೇಳಿದೆ. ಟಿಬೆಟ್ ರಾಜಧಾನಿಯಿಂದ ಸುಮಾರು 1,375ಕಿ.ಮೀ.ದೂರದಲ್ಲಿ ಲಾಸಾದ ಗ್ಯಾಂಬೇ ಟೌನ್‌ಶಿಪ್‌ನಲ್ಲಿರುವ ಸರ್ಕಾರಿ ಕಟ್ಟಡಕ್ಕೆ ಬಾಂಬ್ ದಾಳಿ ನಡೆಸಿದ ಆರೋಪದ ಮೇಲೆ ಈ ಆದೇಶ ನೀಡಲಾಗಿದೆ ಎಂದು ನ್ಯಾಯಾಧೀಶರಾದ ಗಾಂಗ್ ವೆಯ್‌ಲಾಯ್ ತಿಳಿಸಿದ್ದಾರೆ.

ಚೀನಾ ಟಿಬೆಟ್‌ನಲ್ಲಿ ಅತಿಕ್ರಮಣ ನಡೆಸುತ್ತಿದೆ ಎಂದು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಬೌದ್ಧ ಭಿಕ್ಷುಗಳು ನಂತರ ಹಿಂಸಾಚಾರದಲ್ಲಿ ತೊಡಗಿದ್ದರೆಂದು ಚೀನಾ ಆರೋಪಿಸಿತ್ತು.

ಎಂಟು ಮಂದಿ ದೋಷಿತರಲ್ಲಿ ಗುರ್ಮೆ ಧೋಂಡೂಪ್ ಮತ್ತು ಕಾಲ್ಸಾಂಗ್ ಸೆರಿಂಗ್ ಸೇರಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಉಳಿದವರಿಗೆ 5 ರಿಂದ 15ವರ್ಷಗಳ ಸೆರೆಮನೆವಾಸ ಶಿಕ್ಷೆ ವಿಧಿಸಿರುವುದಾಗಿ ಗಾಂಗ್ ಅವರು ದೂರವಾಣಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಷ್ ಈಗ ಟೆನ್ನಿಸ್ ಆಟದಲ್ಲಿ ಬ್ಯುಸಿಯಂತೆ...
ಕಾಬೂಲ್ ದಾಳಿಯಲ್ಲಿ ಪಾಕ್ ಕೈವಾಡವಿಲ್ಲ: ದುರ್ರಾನಿ
ಪಾಕ್-ಚೀನಾ ನಡುವೆ ಅಣುಬಂಧ ಸಾಧ್ಯತೆ:ವಕ್ತಾರ
ಜರ್ದಾರಿ ಚೀನಾ ಪ್ರವಾಸ ಆರಂಭ
ಅಮೆರಿಕ ಪರೀಕ್ಷಕರ ಮೇಲಿನ ನಿಷೇಧ ವಾಪಸ್:ದ.ಕೊರಿಯಾ
ಲಾಸ್‌‌ಏಂಜಲೀಸ್: ಕಾಳ್ಗಿಚ್ಚಿಗೆ ಇಬ್ಬರು ಬಲಿ