ಗ್ಲಾಸ್ಗೋ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ನಡೆಸಿದ ವಿಫಲ ಯತ್ನದ ಸಂಚಿನಲ್ಲಿ ಬೆಂಗಳೂರಿನ ಕಫೀಲ್ ಅಹಮದ್ ಪಾತ್ರವಿರುವುದನ್ನು ಪುಷ್ಟೀಕರಿಸುವ ಹೊಸ ವಿಡಿಯೋ ಚಿತ್ರಣವನ್ನು ಲಂಡನ್ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಗ್ಲಾಸ್ಗೋ ವಿಮಾನ ನಿಲ್ದಾಣಕ್ಕೆ ಜೀಪು ಡ್ರೈವ್ ಮಾಡಿಕೊಂಡು ಕಫೀಲ್ ಅಹಮದ್ ತೆರಳುತ್ತಿರುವ ದೃಶ್ಯವನ್ನು ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮರಾಗಳು ಚಿತ್ರೀಕರಿಸಿದ್ದವು.
ಕಫೀಲ್ ಬೆಂಕಿ ಗಾಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವನೊಂದಿಗಿದ್ದ ಬಿಲಾಲ್ ಅಬ್ದುಲ್ ಮತ್ತು ಮಹಮದ್ ಆಶಾ ಅವರ ವಿಚಾರಣೆ ನಡೆಯುತ್ತಿದೆ.
ವಿಚಾರಣೆ ವೇಳೆ ಹೊಸ ವಿಡಿಯೋ ಚಿತ್ರಿಕೆ ಹಾಜರುಪಡಿಸಲಾಗಿದೆ. |