ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಚೀನಾ-ಪಾಕ್ ನಡುವೆ 11 ಒಪ್ಪಂದಕ್ಕೆ ಸಹಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನಾ-ಪಾಕ್ ನಡುವೆ 11 ಒಪ್ಪಂದಕ್ಕೆ ಸಹಿ
ಚೀನಾ ಮತ್ತು ಪಾಕಿಸ್ತಾನದ ನಡುವೆ ಬುಧವಾರ ಸಂಜೆ ಚೀನಾ ಅಧ್ಯಕ್ಷ ಹು ಜಿಂಟಾವೋ ಮತ್ತು ಪಾಕ್ ಅಧ್ಯಕ್ಷ ಜರ್ದಾರಿ ಅವರು ಸುಮಾರು 11 ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ತಿಳಿವಳಿಕಾ ಪತ್ರ ಮತ್ತು ಪ್ರೋಟೋಕಾಲ್ ಪ್ರಕಾರ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ವ್ಯಾಪಾರ, ಇಂಧನ, ಮೂಲಭೂತ ಸೌಕರ್ಯ, ಕೃಷಿ, ಕೈಗಾರಿಕೆ, ಗಣಿಗಾರಿಕೆ, ದೂರಸಂಪರ್ಕ, ವಿಪತ್ತು ನಿಧಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ 11 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಈ ಸಂದರ್ಭದಲ್ಲಿ ಚೀನಾ ಕೂಡ ಪಾಕಿಸ್ತಾನದಲ್ಲಿ ಬಂಡವಾಳ ಹೂಡುವಂತೆ ಮನವಿ ಮಾಡಿಕೊಂಡರು. ಎರಡು ದೇಶಗಳ ನಿಯೋಗದೊಂದಿಗೆ ನಡೆದ ಸುಮಾರು ಎರಡು ಗಂಟೆಗಳ ಸುದೀರ್ಘ ಸಮಾಲೋಚನೆಯ ಬಳಿಕ,ಹು ಜಿಂಟಾವೋ ಮತ್ತು ಜರ್ದಾರಿ ಒಪ್ಪಂದಕ್ಕೆ ಅಂಕಿತ ಹಾಕಿದರು.

ಆ ನಿಟ್ಟಿನಲ್ಲಿ ಚೀನಾ ಮತ್ತು ಪಾಕ್ ಒಪ್ಪಂದಗಳ ಕುರಿತು ಗುರುವಾರ ಹು ಜಿಂಟಾವೋ ಮತ್ತು ಜರ್ದಾರಿ ಜಂಟಿ ಪತ್ರಿಕಾ ಹೇಳಿಕೆ ನೀಡಲಿರುವರು ಎಂದು ಮೂಲಗಳು ಹೇಳಿವೆ.

ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯದೊಂದಿಗೆ ಸಹಕಾರ ನೀಡಿ ವ್ಯವಹಾರ ನಡೆಸುವ ಕುರಿತು ಮಹತ್ವದ ಮಾತುಕತೆಗಳು ಇಬ್ಬರು ಅಧ್ಯಕ್ಷರ ನಡುವೆ ನಡೆಯಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗ್ಲಾಸ್ಗೋ ಸ್ಫೋಟ: ಕಫೀಲ್ ಪಾತ್ರ ದೃಢ
ತಾಲಿಬಾನ್ ಮುಖಂಡ ಮೆಹ್ಸೂದ್‌ಗೆ 2ನೆ ವಿವಾಹ
ಭಯೋತ್ಪಾದನೆ ವಿರುದ್ಧ ಸಮರ ನಿರ್ಧಾರ ಸರಿ:ಮುಷ್
ಭಯೋತ್ಪಾದಕ ದಾಳಿ ಭೀತಿಯಲ್ಲಿ ಬ್ರಿಟನ್:ವೆಸ್ಟ್
ಆತ್ಮಹತ್ಯಾ ಬಾಂಬ್ ದಾಳಿ ಇಸ್ಲಾಂ ವಿರೋಧಿ:ಉಲೇಮಾ
ಬಾಂಬ್ ಬ್ಲಾಸ್ಟ್ ಪ್ರಕರಣ:8 ಬೌದ್ಧಭಿಕ್ಷುಗಳಿಗೆ ಶಿಕ್ಷೆ