ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಆರ್ಥಿಕ ಹೊಡೆತ: ಅವಸಾನದಲ್ಲಿ ಬಿಬಿಸಿ-ಸಿಂಪ್ಸನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಹೊಡೆತ: ಅವಸಾನದಲ್ಲಿ ಬಿಬಿಸಿ-ಸಿಂಪ್ಸನ್
ವಿಶ್ವವಿಖ್ಯಾತ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ) ಅವಸಾನದ ಅಂಚಿನಲ್ಲಿದೆ ಎಂದು ಬಿಬಿಸಿಯ ವ್ಯವಹಾರಗಳ ವಿಭಾಗದ ಸಂಪಾದಕ ಜಾನ್ ಸಿಂಪ್ಸನ್ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬಿಬಿಸಿಗೆ ಉತ್ತಮ ಭವಿಷ್ಯವಿದೆಯೇ ಎಂಬ ಬಗ್ಗೆ ನಾನು ಚಿಂತಿಸಿಲ್ಲ, ಆದರೆ ಬಿಬಿಸಿ ಉತ್ತಮವಾಗಿಯೂ ಮುಂದುವರಿಯಬಹುದು, ಇಲ್ಲದೆಯೂ ಇರಬಹುದು ಎಂದು ತಿಳಿಸಿದರು.

ವಿಶ್ವಸೇವಾ ಲೈಸೆನ್ಸ್ ಶುಲ್ಕದಲ್ಲಿ ಗಣನೀಯ ಕಡಿತ ಉಂಟಾಗಿರುವುದರಿಂದ ಬಿಬಿಸಿಯ ಆದಾಯ ಕುಸಿದಿದ್ದು,ಗುಣಮಟ್ಟದ ಕಾರ್ಯಕ್ರಮಗಳ ಪ್ರಸಾರಕ್ಕೆ ಬೇಕಾದ ಸಂಪನ್ಮೂಲಕ್ಕೆ ಕೊರತೆ ಉಂಟಾಗಿದೆ ಎಂದು ಕಳೆದ 40 ವರ್ಷಗಳಿಂದ ಅಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಹೇಳಿದ್ದಾರೆ.

ಸಂಪನ್ಮೂಲ ಕೊರತೆಯಿಂದಾಗಿ ಬಿಬಿಸಿಯ ಭವಿಷ್ಯ ಈಗ ಡೋಲಾಯಮಾನವಾಗಿದೆ ಎಂದು ಅವರು ಚೆಲ್ತೆನಂ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.

ಬಿಬಿಸಿಗೆ ದೊರಕುತ್ತಿದ್ದ ಬಜೆಟ್ ಅನುದಾನ ಪ್ರಸಕ್ತ ದಿನಗಳಲ್ಲಿ ಕಡಿಮೆಯಾಗಿರುವುದರಿಂದ 2,500ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ತಮಗೂ ಇದೇ ಗತಿ ಆಗಬಹುದು ಎಂಬುದು ಸಿಂಪ್ಸನ್ ಅವರ ಆತಂಕ.

ಸಿಂಪ್ಸನ್ ಅವರು ತಮ್ಮ 40 ವರ್ಷಗಳ ಕಾಲ ಬಿಬಿಸಿ ಸೇವಾವಧಿಯಲ್ಲಿ 120 ರಾಷ್ಟ್ರಗಳನ್ನು ಭೇಟಿ ಮಾಡಿ ವರದಿ ಮಾಡಿದ ಅನುಭವ ಹೊಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನಾ-ಪಾಕ್ ನಡುವೆ 11 ಒಪ್ಪಂದಕ್ಕೆ ಸಹಿ
ಗ್ಲಾಸ್ಗೋ ಸ್ಫೋಟ: ಕಫೀಲ್ ಪಾತ್ರ ದೃಢ
ತಾಲಿಬಾನ್ ಮುಖಂಡ ಮೆಹ್ಸೂದ್‌ಗೆ 2ನೆ ವಿವಾಹ
ಭಯೋತ್ಪಾದನೆ ವಿರುದ್ಧ ಸಮರ ನಿರ್ಧಾರ ಸರಿ:ಮುಷ್
ಭಯೋತ್ಪಾದಕ ದಾಳಿ ಭೀತಿಯಲ್ಲಿ ಬ್ರಿಟನ್:ವೆಸ್ಟ್
ಆತ್ಮಹತ್ಯಾ ಬಾಂಬ್ ದಾಳಿ ಇಸ್ಲಾಂ ವಿರೋಧಿ:ಉಲೇಮಾ