ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನಮ್ಮದು ಎಲ್‌ಟಿಟಿಇ ವಿರುದ್ಧ ಕದನ: ಶ್ರೀಲಂಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಮ್ಮದು ಎಲ್‌ಟಿಟಿಇ ವಿರುದ್ಧ ಕದನ: ಶ್ರೀಲಂಕಾ
ಶ್ರೀಲಂಕಾದಲ್ಲಿನ ಎಲ್‌ಟಿಟಿಇ ಬೆಳವಣಿಗೆ ಬಗ್ಗೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು,ಎಲ್‌ಟಿಟಿಇ ವಿರುದ್ಧ ತಮ್ಮ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಮತ್ತು ನಮ್ಮ ಹೋರಾಟ ಉಗ್ರರ ವಿರುದ್ಧವೇ ವಿನಃ ತಮಿಳರ ವಿರುದ್ಧ ಅಲ್ಲ ಎಂದು ಗುರುವಾರ ಶ್ರೀಲಂಕಾ ಸರ್ಕಾರ ಸ್ಪಷ್ಟಪಡಿಸಿದೆ.

ಉತ್ತರ ಮತ್ತು ಪೂರ್ವದಲ್ಲಿನ ಭಯೋತ್ಪಾದಕರ ವಿರುದ್ಧವೇ ಸೇನಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ಆರಂಭದಿಂದಲೂ ನಮಗೆ ಸ್ಪಷ್ಟನೆ ಇದೆ ಮತ್ತು ತಮಿಳು ಜನರ ವಿರುದ್ಧ ನಿರ್ದೇಶನ ನೀಡಿಲ್ಲ ಎಂದು ಲಂಕಾ ವಿದೇಶಾಂಗ ಕಾರ್ಯದರ್ಶಿ ಡಾ.ಪಲಿಥಾ ಕೊಹೊನಾ ಅವರು ಹೇಳಿದ್ದಾರೆ.

ಉತ್ತರ ಭಾಗದಲ್ಲಿರುವ ನಾಗರಿಕರು ಸುರಕ್ಷಿತವಾಗಿದ್ದಾರೆ. 2006-07ರಲ್ಲಿ ಪೂರ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಯಾವುದೇ ನಾಗರಿಕರಿಗೆ ಹಾನಿಯುಂಟು ಮಾಡದೇ ಉಗ್ರರನ್ನು ಓಡಿಸಿದ ಕೀರ್ತಿ ಶ್ರೀಲಂಕಾ ಸೇನಾ ಪಡೆಗಿದೆ ಎಂದು ಅವರು ತಿಳಿಸಿದರು.

ಈಗ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯ ಪ್ರತಿ ಹಂತಗಳನ್ನು ವೀಕ್ಷಿಸಲಾಗುತ್ತಿದ್ದು, ಈವರೆಗೆ ಯಾವುದೇ ಒಬ್ಬ ಸಾಮಾನ್ಯ ನಾಗರಿಕ ಹತ್ಯೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಲೇಶ್ಯಾದಲ್ಲಿ 'ಹಿಂದೂ ರಕ್ಷಣಾ ಕಾರ್ಯಪಡೆ'ಗೆ ನಿಷೇಧ
ಆರ್ಥಿಕ ಹೊಡೆತ: ಅವಸಾನದಲ್ಲಿ ಬಿಬಿಸಿ-ಸಿಂಪ್ಸನ್
ಚೀನಾ-ಪಾಕ್ ನಡುವೆ 11 ಒಪ್ಪಂದಕ್ಕೆ ಸಹಿ
ಗ್ಲಾಸ್ಗೋ ಸ್ಫೋಟ: ಕಫೀಲ್ ಪಾತ್ರ ದೃಢ
ತಾಲಿಬಾನ್ ಮುಖಂಡ ಮೆಹ್ಸೂದ್‌ಗೆ 2ನೆ ವಿವಾಹ
ಭಯೋತ್ಪಾದನೆ ವಿರುದ್ಧ ಸಮರ ನಿರ್ಧಾರ ಸರಿ:ಮುಷ್