ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಖಾಡ ಜಿದ್ದಾಜಿದ್ದಿನ ಅಂತಿಮ ಹೋರಾಟದಲ್ಲಿರುವ ಡೆಮೋಕ್ರಟ್‌ನ ಬರಾಕ್ ಒಬಾಮ ಅವರು ಪ್ರತಿಸ್ಪರ್ಧಿ ರಿಪಬ್ಲಿಕ್‌ನ ಜಾನ್ ಮೆಕೇನ್ ಅವರಿಗಿಂತ 5ಅಂಕಗಳ ಮುನ್ನಡೆ ಸಾಧಿಸಿರುವುದಾಗಿ ಗುರುವಾರ ಬಿಡುಗಡೆಗೊಂಡ ಚುನಾವಣಾ ಅಂಕಿ-ಅಂಶ ತಿಳಿಸಿದೆ.
ಈವರೆಗೆ ನಡೆದ ವಾಗ್ವಾದ ನಂತರ ಒಬಾಮ ಅವರು ಮೆಕೇನ್‌ಗಿಂತ 49ಶೇ ಮುಂದಿದ್ದರೆ, ರಿಪಬ್ಲಿಕ್‌ನ ಮೆಕೇನ್ 44ಶೇ.ಪಡೆದಿದ್ದಾರೆ. ಇದು ಕಳೆದ ನಾಲ್ಕು ದಿನಗಳ ಅಂಕವಾಗಿದೆ. ಬುಧವಾರದಂದು ಒಬಾಮ ಅವರು ನಾಲ್ಕು ಅಂಕಗಳ ಮುನ್ನಡೆ ಸಾಧಿಸಿದ್ದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ 19ದಿನಗಳಿದ್ದು, ಸ್ಪರ್ಧೆಗೆ ನಾಟಕೀಯವಾಗಿ ಹಿಂದಿರುಗುವ ಯತ್ನದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್ ಅವರು ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮ ಅವರೊಂದಿಗೆ ಒಂದೇ ವೇದಿಕೆಯಲ್ಲಿ ವಾಗ್ವಾದಕ್ಕಿಳಿದ್ದರು.
ಜಾನ್ ಮೆಕೇನ್ ಅವರಿಗೆ ಇದು ಕೊನೆಯ ಅವಕಾಶವಾಗಿದ್ದು, ನವೆಂಬರ್ 4ರಂದು ಚುನಾವಣೆ ನಡೆಯಲಿದ್ದು ಅದಕ್ಕೆ ಮುನ್ನ ಈ ಇಬ್ಬರು ನಾಯಕರು ಅಂತಿಮ ಹಣಾಹಣಿಯಲ್ಲಿ ಅಗ್ನಿಪರೀಕ್ಷೆಗೆ ಒಳಗಾಗಿದ್ದಾರೆ.
ಮೊದಲ ಎರಡು ಇಂತಹ ಚರ್ಚೆಗಳಲ್ಲಿ ಮೆಕೇನ್ ಸೋತಿದ್ದು, ಈ ಬಾರಿ ಆರ್ಥಿಕ ಬಿಕ್ಕಟ್ಟನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಸಿದ್ದರಾಗಿ ಬಂದಿದ್ದರು. ಇದೀಗ ಅಮೆರಿಕ ಅಧ್ಯಕ್ಷ ಪಟ್ಟಗಾಗಿ ನಡೆಯುತ್ತಿರುವ ಹಣಾಹಣಿಯಲ್ಲಿ ಅದೃಷ್ಟ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಾಗಿದೆ. |