ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂದುವರಿದ ಒಬಾಮಾ ಪ್ರಚಾರ ಭರಾಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂದುವರಿದ ಒಬಾಮಾ ಪ್ರಚಾರ ಭರಾಟೆ
ND
ಡೆಮಾಕ್ರೆಟ್ ಪಕ್ಷದ ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮಾ ತನ್ನ ಪ್ರಚಾರ ಭರಾಟೆಯನ್ನು ಮುಂದುವರಿಸಿದ್ದು, ಇದೀಗ ರಿಪಬ್ಲಿಕನ್ ರಾಜ್ಯಗಳತ್ತ ಹೊರಟಿದ್ದಾರೆ.

ಬಿಳಿಯರ ಬಾಹುಳ್ಯವುಳ್ಳ ಹೊಂದಿರುವ ಪಶ್ಚಿಮ ವರ್ಜೀನಿಯಾದಲ್ಲಿ ಪ್ರಚಾರಕ್ಕಿಳಿದಿರುವ ಅವರು, ತನ್ನನ್ನು ಪ್ರಾಥಮಿಕ ಹಂತದಲ್ಲಿ ತಿರಸ್ಕರಿಸಿದ ಮಧ್ಯಮ ವರ್ಗವನ್ನು ಓಲೈಸುವತ್ತ ಹೆಚ್ಚಿನ ಗಮನ ಕೊಟ್ಟು, ಅಧ್ಯಕ್ಷ ಪದವಿಯ ಓಟದಲ್ಲಿ ತಾನೇ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸದಿಂದಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಬುಶ್ ಅಧ್ಯಕ್ಷರಾದಾಗಿನಿಂದ ಮೆಕ್‌ಕೈನ್‌ಗೆ ಅವರನ್ನು ಸಮರ್ಥಿಸಲೇಬೇಕಾದ ಒತ್ತಡವಿರುವುದರಿಂದ ಮೆಕ್‌ಕೈನ್‌ಗೆ ವಿಶ್ರಾಂತಿ ಅಗತ್ಯವಿದೆ ಎಂದು ಎದುರಾಳಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಬಗ್ಗೆ ಒಬಾಮಾ ಇಲ್ಲಿ ಕಟಕಿಯಾಡಿದರು.

"ನಮಗೀಗ 19 ದಿನಗಳು ಬಾಕಿ ಉಳಿದಿವೆ, ಅದು ಆರಂಭದಿಂದಲ್ಲ, ಕೊನೆಯಿಂದ" ಎಂದು ಅಧ್ಯಕ್ಷೀಯ ಅಭ್ಯರ್ಥಿಗಳ ಅಂತಿಮ ಚರ್ಚೆಯ ಮರುದಿನ ನ್ಯೂಯಾರ್ಕ್‌ನಲ್ಲಿ ನಡೆದ ಧನಸಂಗ್ರಹ ಕಾರ್ಯಾಗಾರದಲ್ಲಿ ಪಾಲ್ಗೊಂಡ ಒಬಾಮಾ ನೆರೆದಿದ್ದ ಜನಸಾಗರದೆದುರು ಹೇಳಿ ಚಪ್ಪಾಳೆ ಗಿಟ್ಟಿಸಿದರು. ಅದೇ ಹೊತ್ತಿಗೆ ಮುಂದಿನ ಅಮೆರಿಕಾ ಅಧ್ಯಕ್ಷರಿಗೆ 'ವಿಶೇಷ' ಕೆಲಸಗಳಿರುತ್ತವೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ಒಬಾಮಾ ತನ್ನ ಮುಂದಿನ ಕೆಲವು ದಿನಗಳನ್ನು ಮಿಸ್ಸೋರಿ, ಉತ್ತರ ಕೆರೋಲಿನಾ ಮತ್ತು ವರ್ಜೀನಿಯಾಗಳಲ್ಲಿ ಪ್ರಚಾರ ಕಾರ್ಯ ನಡೆಸುವ ಮೂಲಕ ಕಳೆಯಲಿದ್ದಾರೆ. ಬುಷ್ ಎರಡು ಬಾರಿ ಗೆಲುವು ಸಾಧಿಸಿದ್ದ ಪಶ್ಚಿಮ ವರ್ಜೀನಿಯಾದಲ್ಲೂ ಒಬಾಮಾ ತನ್ನ ಛಾಪು ಮೂಡಿಸುವ ಯತ್ನ ಮಾಡುತ್ತಿದ್ದಾರೆ.

ದಿನೇದಿನೇ ಅಮೆರಿಕಾದಾದ್ಯಂತ ಚುನಾವಣೆ ಕಾವು ಏರುತ್ತಿದೆ. ನವೆಂಬರ್ 4ರಂದು ನಡೆಯಲಿರುವ ಮತದಾನದ ಫಲಿತಾಂಶ ಡೆಮಾಕ್ರೆಟ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಾದ ಬರಾಕ್ ಒಬಾಮಾ ಮತ್ತು ಜಾನ್ ಮೆಕ್‌ಕೈನ್‌ ಭವಿಷ್ಯವನ್ನು ನಿರ್ಧರಿಸಲಿದೆ. ಇದುವರೆಗಿನ ಲೆಕ್ಕಾಚಾರದ ಪ್ರಕಾರ ಒಬಾಮಾ ಪರ ಗೆಲುವಿನ ಒಲವು ಹೆಚ್ಚಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇರಾಕ್ ಯುದ್ಧದಲ್ಲಿ ಅಮೆರಿಕಾ ಸೇನೆಯ 4185 ಮಂದಿ ಸಾವು
ಅಧ್ಯಕ್ಷ ಚುನಾವಣೆ: ಒಬಾಮ 5 ಅಂಕ ಮುನ್ನಡೆ
ನಮ್ಮದು ಎಲ್‌ಟಿಟಿಇ ವಿರುದ್ಧ ಕದನ: ಶ್ರೀಲಂಕಾ
ಮಲೇಶ್ಯಾದಲ್ಲಿ 'ಹಿಂದೂ ರಕ್ಷಣಾ ಕಾರ್ಯಪಡೆ'ಗೆ ನಿಷೇಧ
ಆರ್ಥಿಕ ಹೊಡೆತ: ಅವಸಾನದಲ್ಲಿ ಬಿಬಿಸಿ-ಸಿಂಪ್ಸನ್
ಚೀನಾ-ಪಾಕ್ ನಡುವೆ 11 ಒಪ್ಪಂದಕ್ಕೆ ಸಹಿ