ಇಲ್ಲಿನ ಮಹಿಳೆಯೊಬ್ಬಳು ಕಂಠಪೂರ್ತಿ ಕುಡಿದು ತನ್ನ 9 ವರ್ಷದ ಮಗಳ ಮೂಲಕ ಕಾರು ಚಲಾಯಿಸಿದ ಆರೋಪದ ಮೇಲೆ ಶಿಕ್ಷೆಗೊಳಪಟ್ಟಿದ್ದಾಳೆ.
ಅಕ್ಟೋಬರ್ 12ರಂದು ಪಾರ್ಟಿಯೊಂದರಲ್ಲಿ ಆಲ್ಕೋಹಾಲ್ ಸೇವಿಸಿದ ಒಂಟಾರಿಯೋ ಪ್ರದೇಶದ ಮಹಿಳೆಗೆ ಕಾರು ಚಾಲನೆ ಮಾಡುವುದು ಅಸಾಧ್ಯವೆನಿಸಿತ್ತು. ಆಗ ಜೊತೆಗಿದ್ದ 9ರ ಹರೆಯದ ಪುಟ್ಟ ಮಗಳಿಗೆ ಕಾರು ಚಲಾಯಿಸಲು ಹೇಳಿದ್ದಳು. ಬಾಲಕಿಯು ಕಾರನ್ನು ನಿಧಾನವಾಗಿ ನಗರದ ರಸ್ತೆಗಳಲ್ಲಿ ಚಲಾಯಿಸಿದ್ದಳು.
ವಿಷಯ ತಿಳಿದ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಅಷ್ಟು ಚಿಕ್ಕ ಪ್ರಾಯದ ಬಾಲಕಿ ಕಾರು ಚಲಾಯಿಸಿರುವ ಬಗ್ಗೆ ಸ್ವತ: ಪೊಲೀಸರೇ ಇದೀಗ ಆಶ್ಚರ್ಯಗೊಂಡಿದ್ದಾರೆ. |