ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬ್ರಿಟನ್: ಕಠಿಣ ವೀಸಾ ನಿಯಮ ಜಾರಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟನ್: ಕಠಿಣ ವೀಸಾ ನಿಯಮ ಜಾರಿಗೆ
ದೇಶಕ್ಕೆ ವ್ಯವಹಾರಿಕ ವೀಸಾದಲ್ಲಿ ಭೇಟಿ ಕೊಡುವ ವಿದೇಶಿಗರಿಗೆ ಬ್ರಿಟನ್ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮಗಳ ಪ್ರಕಾರ, ಯು.ಕೆ.ಗೆ ವ್ಯವಹಾರದ ಕಾರಣಗಳಿಗಾಗಿ ಭೇಟಿ ಕೊಡಲಿಚ್ಛಿಸುವವರು ಕಡ್ಡಾಯವಾಗಿ ಆರು ತಿಂಗಳ ಅವಧಿಯ ಹೊಸ ಬಿಸಿನೆಸ್ ವೀಸಾಗೆ ಅರ್ಜಿ ಹಾಕಬೇಕು ಮತ್ತು ತಾವು ಹಾಜರಾಗಬೇಕಾದ ಸಭೆ, ಸಮಾರಂಭಗಳ ಅಥವಾ ಇತರ ಚಟುವಟಿಕೆಗಳ ವಿವರವನ್ನು ಕೊಡಬೇಕು.

ತಮ್ಮ ವ್ಯವಹಾರ, ಭೇಟಿಗಳು, ಚರ್ಚೆಗಳ ವಿವರ, ಸರಕು, ವ್ಯಾವಹಾರಿಕ ಒಪ್ಪಂದಗಳು, ಭೇಟಿ ಕೊಡಬೇಕಾಗಿರುನ ನಿರ್ದಿಷ್ಟ ಜಾಗಗಳ ವಿವರ ಮತ್ತು ಇತರ ರಫ್ತು ವ್ಯವಹಾರಗಳ ವಿವರಣೆಯನ್ನು ಬ್ರಿಟನ್ ಸಂದರ್ಶನಕಾರರು ರುಜುವಾತುಪಡಿಸಬೇಕು.

ಬಿಸಿನೆಸ್ ವಿಸಾ, ಪ್ರವಾಸಿ ವಿಸಾ ಮತ್ತು ಕೌಟುಂಬಿಕ ಭೇಟಿಯ ವಿಸಾದ ಹೊಸ ಮಾದರಿಗಳು ಜೂನ್‌ನಲ್ಲಿ ಘೋಷಣೆಯಾಗಲಿವೆ. ಈ ಬದಲಾವಣೆಗಳು ಬ್ರಿಟನ್‌ಗೆ ತೃಪ್ತಿ ಕೊಡಲಿದ್ದು, ನಿಯಮಗಳನ್ನು ಪಾಲಿಸುವವರಿಗೆ ಉತ್ತಮ ಸೇವೆ ಲಭಿಸಲಿದೆ. ಕಾನೂನು ಭಂಜಕರಿಗೆ ಕಠಿಣ ಕ್ರಮದ ಎಚ್ಚರಿಕೆಯೂ ಇದೆ ಎನ್ನುತ್ತಾರೆ ಇಲ್ಲಿನ ಗಡಿ ಮತ್ತು ವಲಸೆ ಸಚಿವ ಫಿಲ್ ವೂಲಸ್.

ಈ ಹೊಸ ನಿಯಮಗಳಡಿಯಲ್ಲಿ ಕ್ರೀಡಾಳುಗಳು ಮತ್ತು ಮನರಂಜನಾ ಕಲಾವಿದರು ಅಲ್ಪಾವಧಿಗಾಗಿ ಯಾವುದೇ ಪೂರ್ವಾನುಮತಿ ಹೊಂದದೆ ದೇಶಕ್ಕೆ ಆಗಮಿಸುವುದಕ್ಕೆ ನಿರ್ಬಂಧವಿರುವುದಿಲ್ಲ. ಯು.ಕೆ. ಭೇಟಿಗಾಗಿ ವೀಸಾಗೆ ಅರ್ಜಿ ಹಾಕುವ ಎಲ್ಲರಿಗೂ ಬೆರಳಚ್ಚು ಗುರುತು (ಫಿಂಗರ್‌ಫ್ರಿಂಟ್) ಮೂಲಕ ಹೊಂದಿಸಲಾಗುವ ಐಡೆಂಟಿಟಿಯಲ್ಲಿ ವಿವರ ಒಳಗೊಂಡಿರುವಂತೆ ಮಾಡಲಾಗುತ್ತದೆ. ಹೊಸ ಆಧುನಿಕ ತಂತ್ರಜ್ಞಾನದಿಂದ ವ್ಯಕ್ತಿಗಳ ಆಗಮನ ಮತ್ತು ನಿರ್ಗಮನ ಲೆಕ್ಕಚಾರವೂ ಸುಲಭಸಾಧ್ಯ. ಈ ಎಲ್ಲಾ ವಿವರಗಳನ್ನು ಹೊಂದಿರುವ ಗುರುತುಚೀಟಿಗಳನ್ನು ವಿದೇಶಗಳಿಗೂ ಹಸ್ತಾಂತರಿಸಲಾಗುತ್ತದೆ ಎಂದು ಬ್ರಿಟನ್ ವಲಸೆ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮಲೇರಿದ ಮಹಿಳೆಯ ಕಮಾಲು !
ಮುಂದುವರಿದ ಒಬಾಮಾ ಪ್ರಚಾರ ಭರಾಟೆ
ಇರಾಕ್ ಯುದ್ಧದಲ್ಲಿ ಅಮೆರಿಕಾ ಸೇನೆಯ 4185 ಮಂದಿ ಸಾವು
ಅಧ್ಯಕ್ಷ ಚುನಾವಣೆ: ಒಬಾಮ 5 ಅಂಕ ಮುನ್ನಡೆ
ನಮ್ಮದು ಎಲ್‌ಟಿಟಿಇ ವಿರುದ್ಧ ಕದನ: ಶ್ರೀಲಂಕಾ
ಮಲೇಶ್ಯಾದಲ್ಲಿ 'ಹಿಂದೂ ರಕ್ಷಣಾ ಕಾರ್ಯಪಡೆ'ಗೆ ನಿಷೇಧ