ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಥಾಯ್ ಮಾಜಿ ಪ್ರಧಾನಿ ಪ್ರಕರಣ ನ್ಯಾಯಾಂಗ ಪರಾಮರ್ಶೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಥಾಯ್ ಮಾಜಿ ಪ್ರಧಾನಿ ಪ್ರಕರಣ ನ್ಯಾಯಾಂಗ ಪರಾಮರ್ಶೆಗೆ
ಥಾಯ್ಲೆಂಡಿನ ಮಾಜಿ ಪ್ರಧಾನಿ ತಾಸ್ಕಿನ್ ಶಿನವಾತ್ರಾರ ಅಕ್ರಮ ಆಸ್ತಿ ವಿವಾದವನ್ನು ನ್ಯಾಯಾಂಗ ಪರಾಮರ್ಶೆಗೊಳಪಡಿಸಲು ಇಲ್ಲಿನ ಸರ್ವೋಚ್ಛ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.

ಮಾಜಿ ಪ್ರಧಾನಿ ತಾಸ್ಕಿನ್‌ರಿಗೆ ಸೇರಿದ ಸುಮಾರು 76 ಬಿಲಿಯನ್ ಬಾತ್(2.23 ಬಿಲಿಯನ್ ಅಮೆರಿಕನ್ ಡಾಲರ್) ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಟಾರ್ನಿ ಜನರಲ್ ಕಚೇರಿ ಸಲ್ಲಿಸಿದ್ದ ಅಹವಾಲನ್ನು ಸ್ವೀಕರಿಸಿದ 9 ನ್ಯಾಯಾಧೀಶರನ್ನೊಳಗೊಂಡ ನ್ಯಾಯಾಲಯವು ಒಪ್ಪಿಗೆ ಸೂಚಿಸಿ, ನ್ಯಾಯಾಂಗದ ವಿಮರ್ಶೆಗೆ ಅಸ್ತು ಎಂದಿದೆ.

ತಾಸ್ಕಿನ್ ಮತ್ತು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯ ವಾರಸುದಾರರು ಇದೇ ಡಿಸೆಂಬರ್ 25ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದು, ಆದೇಶದ 30 ದಿನಗಳೊಳಗೆ ಆರೋಪಿ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದೆ. ತನಿಖೆಯ ಸಂದರ್ಭದಲ್ಲಿ ಆರೋಪಿಯ ಬ್ಯಾಂಕ್ ಖಾತೆಯಲ್ಲಿನ 2006 ಸೆಪ್ಟೆಂಬರ್ 19ರ ಕ್ಷಿಪ್ರಕ್ರಾಂತಿಯ ನಂತರದ ಗಳಿಕೆಯನ್ನು ತಡೆ ಹಿಡಿಯಲಾಗಿದೆ.

ಇದೇ ಸಂದರ್ಭದಲ್ಲಿ ಆರೋಪಿಗೆ ಮಾಹಿತಿ ನೀಡುವ ಉದ್ದೇಶಕ್ಕಾಗಿ ನ್ಯಾಯಾಲಯದ ಮುಂದಿರುವ ಆಪಾದನೆಯನ್ನು ಮೂರು ದಿನಗಳ ಕಾಲ ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಳೆದ ಆಗಸ್ಟ್‌ನಲ್ಲಿ ಬೀಜಿಂಗ್‌ ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನೆಯ ನಂತರ ತಾಸ್ಕಿನ್ ಪತ್ನಿ ಪೂಜಾಮನ್ ಜತೆ ಬ್ರಿಟನ್‌ಗೆ ಪರಾರಿಯಾಗಿದ್ದು, ಅಲ್ಲಿ ರಾಜಕೀಯ ಆಶ್ರಯದ ಬೇಡಿಕೆಯನ್ನು ಬ್ರಿಟನ್ ಸರಕಾರಕ್ಕೆ ಸಲ್ಲಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋಮಾಲಿಯಾ ಕಡಲ್ಗಳ್ಳರಿಗೆ ಒತ್ತೆ ಹಣ
ಬ್ರಿಟನ್: ಕಠಿಣ ವೀಸಾ ನಿಯಮ ಜಾರಿಗೆ
ಅಮಲೇರಿದ ಮಹಿಳೆಯ ಕಮಾಲು !
ಮುಂದುವರಿದ ಒಬಾಮಾ ಪ್ರಚಾರ ಭರಾಟೆ
ಇರಾಕ್ ಯುದ್ಧದಲ್ಲಿ ಅಮೆರಿಕಾ ಸೇನೆಯ 4185 ಮಂದಿ ಸಾವು
ಅಧ್ಯಕ್ಷ ಚುನಾವಣೆ: ಒಬಾಮ 5 ಅಂಕ ಮುನ್ನಡೆ