ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣು ಒಪ್ಪಂದ: ಚೀನಾದ ಒಪ್ಪಿಗೆ ಪಡೆಯಲು ಜರ್ದಾರಿ ವಿಫಲ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ: ಚೀನಾದ ಒಪ್ಪಿಗೆ ಪಡೆಯಲು ಜರ್ದಾರಿ ವಿಫಲ?
ಚೀನಾದೊಂದಿಗಿನ ಪರಮಾಣು ಒಪ್ಪಂದಕ್ಕೆ ಅಲ್ಲಿನ ನಾಯಕರ ಬದ್ಧತೆಯನ್ನು ಸ್ಪಷ್ಟಪಡಿಸಿಕೊಳ್ಳಲು ಪಾಕಿಸ್ತಾನ ಪ್ರಧಾನಿ ಆಸಿಫ್ ಆಲಿ ಜರ್ದಾರಿ ವಿಫಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಜರ್ದಾರಿಯವರ ಎರಡು ದಿನಗಳ ಬೀಜಿಂಗ್‌ನ ಅಧಿಕೃತ ಭೇಟಿಯಲ್ಲಿ ಸೈನೋ-ಪಾಕಿಸ್ತಾನ್ ಪರಮಾಣು ಒಪ್ಪಂದಕ್ಕೆ ಸಹಿ ಪಡೆಯುವ ಉದ್ದೇಶ ಸಫಲವಾಗಿಲ್ಲ ಎನ್ನಲಾಗಿದೆ. ಆದರೂ, ಭಾರತ-ಅಮೆರಿಕಾ ಅಣು ಒಪ್ಪಂದದ ಹಿನ್ನಲೆಯಲ್ಲಿ ಜರ್ದಾರಿಯವರ ಮನವಿಯನ್ನು ಪುರಸ್ಕರಿಸುವ ಬಗ್ಗೆ ಬೀಜಿಂಗ್ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ ಎಂಬ ಸೂಚನೆ ಲಭಿಸಿದೆ. ಅದೇ ಹೊತ್ತಿಗೆ ಪಾಕಿಸ್ತಾನದಲ್ಲಿನ ರಾಜಕೀಯ ಅತಂತ್ರತೆಯ ಬಗ್ಗೆ ಕಳವಳಗೊಂಡಿರುವ ಚೀನಾ ನಾಯಕರು ಈ ಪ್ರಸ್ತಾವನೆ ಬಗ್ಗೆ ಒಲವು ಹೊಂದಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.

ಚೀನಾ ಅಧ್ಯಕ್ಷ ಹೂ ಜಿಂತಾವೋ ಪಾಕಿಸ್ತಾನದ ಬಗ್ಗೆ ಸದಾಭಿಪ್ರಾಯ ಹೊಂದಿರುವುದರಿಂದ ಮತ್ತು ಚೀನಾ-ಪಾಕ್ ಸ್ನೇಹಕ್ಕೆ ನಾಲ್ಕು ದಶಕಗಳ ಇತಿಹಾಸ ಇರುವ ಕಾರಣದಿಂದಾಗಿ ಅಣು ಒಪ್ಪಂದದ ಬಗ್ಗೆ ಈಗಲೇ ಏನೂ ಹೇಳಲಾಗದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಥಾಯ್ ಮಾಜಿ ಪ್ರಧಾನಿ ಪ್ರಕರಣ ನ್ಯಾಯಾಂಗ ಪರಾಮರ್ಶೆಗೆ
ಸೋಮಾಲಿಯಾ ಕಡಲ್ಗಳ್ಳರಿಗೆ ಒತ್ತೆ ಹಣ
ಬ್ರಿಟನ್: ಕಠಿಣ ವೀಸಾ ನಿಯಮ ಜಾರಿಗೆ
ಅಮಲೇರಿದ ಮಹಿಳೆಯ ಕಮಾಲು !
ಮುಂದುವರಿದ ಒಬಾಮಾ ಪ್ರಚಾರ ಭರಾಟೆ
ಇರಾಕ್ ಯುದ್ಧದಲ್ಲಿ ಅಮೆರಿಕಾ ಸೇನೆಯ 4185 ಮಂದಿ ಸಾವು