ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಡಬ್ಲ್ಯೂ.ಕೇಸಿ ಸಿಯಾಚಿನ್ ಭೇಟಿಗೆ ಪಾಕ್ ಆಕ್ಷೇಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಬ್ಲ್ಯೂ.ಕೇಸಿ ಸಿಯಾಚಿನ್ ಭೇಟಿಗೆ ಪಾಕ್ ಆಕ್ಷೇಪ
ಮೂರು ದಿನಗಳ ಭಾರತ ಪ್ರವಾಸ ಸಂದರ್ಭದಲ್ಲಿ ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ಡಬ್ಲ್ಯೂ ಕೇಸಿ ಅವರು ಜಮ್ಮು-ಕಾಶ್ಮೀರದ ಸಿಯಾಚಿನ್ ನೀರ್ಗಲ್ಲು ಪ್ರದೇಶಕ್ಕೆ ಭೇಟಿ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ತಾನ ಸರ್ಕಾರವು,ಈ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದೆ.

ವಿವಾದಿತ ಪ್ರದೇಶದ ಬಗ್ಗೆ ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೇಸಿ ಅವರು, ಅಲ್ಲಿಗೆ ಭೇಟಿ ನೀಡುವುದರಿಂದ ಉಭಯ ರಾಷ್ಟ್ರಗಳ ಮಧ್ಯೆಯೇ ಶಾಂತಿ ಮಾತುಕತೆಗೆ ಅಡ್ಡಿ ಉಂಟಾಗುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಸಿಯಾಚಿನ್ ಪ್ರದೇಶದಲ್ಲಿ 1984 ರಿಂದ ಭಾರತ ಮತ್ತು ಪಾಕಿಸ್ತಾನದ ಸೇನಾ ಯೋಧರು ಮುಖಾಮುಖಿ ಆಗಿರುವುದರಿಂದ ಭಾರತದ ನಾಗರಿಕ ಅಥವಾ ಸೇನಾ ಸಾಹಸಿಗರ ಚಾರಣಕ್ಕೂ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿತ್ತು.

2003ರ ಅಂತ್ಯದಲ್ಲಿ ಕದನವಿರಾಮ ಘೋಷಣೆ ಆಗುವವರೆಗೂ ಸಿಯಾಚಿನ್ ಗಡಿ ನಿಯಂತ್ರಣ ರೇಖೆಯಲ್ಲಿದೆ ಭಾರತ ಮತ್ತು ಪಾಕಿಸ್ತಾನ ಸೈನಿಕರ ಮಧ್ಯೆ ಆಗಾಗ ಗುಂಡಿನ ಚಕಮಕಿ ನಡೆಯುತ್ತಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಣು ಒಪ್ಪಂದ: ಚೀನಾದ ಒಪ್ಪಿಗೆ ಪಡೆಯಲು ಜರ್ದಾರಿ ವಿಫಲ?
ಥಾಯ್ ಮಾಜಿ ಪ್ರಧಾನಿ ಪ್ರಕರಣ ನ್ಯಾಯಾಂಗ ಪರಾಮರ್ಶೆಗೆ
ಸೋಮಾಲಿಯಾ ಕಡಲ್ಗಳ್ಳರಿಗೆ ಒತ್ತೆ ಹಣ
ಬ್ರಿಟನ್: ಕಠಿಣ ವೀಸಾ ನಿಯಮ ಜಾರಿಗೆ
ಅಮಲೇರಿದ ಮಹಿಳೆಯ ಕಮಾಲು !
ಮುಂದುವರಿದ ಒಬಾಮಾ ಪ್ರಚಾರ ಭರಾಟೆ