ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಚೀನ: ವಿದೇಶಿ ಪತ್ರಕರ್ತರಿಗೆ ಮುಕ್ತ ಸ್ವಾತಂತ್ರ್ಯ ವಿಸ್ತರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನ: ವಿದೇಶಿ ಪತ್ರಕರ್ತರಿಗೆ ಮುಕ್ತ ಸ್ವಾತಂತ್ರ್ಯ ವಿಸ್ತರಣೆ
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆಂದು ವಿದೇಶಗಳ ಪತ್ರಕರ್ತರಿಗೆ ನೀಡಲಾಗಿದ್ದ ಉನ್ನತ ಸ್ವಾತಂತ್ರ್ಯವನ್ನು ಮುಂದುವರಿಸುವುದಾಗಿ ಚೀನಾ ಶುಕ್ರವಾರ ಪ್ರಕಟಿಸಿದೆ. ಆದರೆ ದೇಶೀಯ ಪತ್ರಕರ್ತರಿಗಿರುವ ಯಾವುದೇ ನಿರ್ಬಂಧಗಳನ್ನು ಸಡಿಲಿಸಿಲ್ಲ.

ವಿದೇಶೀ ಪತ್ರಕರ್ತರು ಸಂದರ್ಶನ ನಡೆಸುವ ಮತ್ತು ಚೀನಾದೆಲ್ಲೆಡೆ ಸಂಚರಿಸಲು ಇರುವ ಮುಕ್ತ ಅವಕಾಶವನ್ನು ವಿಸ್ತರಿಸಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಲೀ ಜಿಯಾನ್ಚೋ ಶುಕ್ರವಾರ ತಡರಾತ್ರಿ ನಡೆಸಿದ ಪತ್ರಿಕಾ ಸಂವಾದದಲ್ಲಿ ತಿಳಿಸಿದರು.

"ಚೀನಾವನ್ನು ಜಗತ್ತಿಗೆ ತೆರೆದಿಡಲು ನಮಗಿದೊಂದು ಮಹತ್ವದ ಮೈಲುಗಲ್ಲು ಮಾತ್ರವಲ್ಲ, ಪತ್ರಕರ್ತರಿಗೂ ಇದೊಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಇದೇ ಸಂದರ್ಭದಲ್ಲಿ ಲೀ ಹೇಳಿದ್ದಾರೆ. ಅದೇ ಹೊತ್ತಿಗೆ ವಿದೇಶೀ ಮಾಧ್ಯಮಗಳಲ್ಲಿ ದೇಶೀಯರು ಚೀನಾದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುವಲ್ಲಿನ ನಿರ್ಬಂಧ ಮುಂದುವರಿಯಲಿದೆ ಹಾಗೂ ಸ್ಥಳೀಯ ಪತ್ರಕರ್ತರಿಗೆ ಈ ರೀತಿಯ ಯಾವುದೇ ಸ್ವಾತಂತ್ರ್ಯಗಳನ್ನು ನೀಡಿಲ್ಲ ಎಂದರು.

ಈಗಿರುವ ನಿಯಮಗಳನ್ನು ಒಲಿಂಪಿಕ್ಸ್ ಹಿನ್ನಲೆಯಲ್ಲಿ ಕಳೆದ ವರ್ಷದ ಜನವರಿ 1ರಂದು ಜಾರಿಗೆ ತರಲಾಗಿತ್ತು. ಆ ನಿಯಮಗಳ ಅವಧಿ ಶುಕ್ರವಾರ ಮುಗಿಯಲಿದ್ದ ಕಾರಣ ಚೀನಾ ಸರಕಾರ ಇದನ್ನು ವಿಸ್ತರಿಸುವ ಕ್ರಮ ಕೈಗೊಂಡಿದೆ. ಚೀನಾ ಒಲಿಂಪಿಕ್ಸ್ ಕ್ರೀಡಾಕೂಟಕ್ಕಿದ್ದ ಪತ್ರಿಕಾ ಸ್ವಾತಂತ್ರ್ಯ ವಿಸ್ತರಿಸಿರುವುದನ್ನು ವಿದೇಶೀ ಪ್ರತಿನಿಧಿಗಳ ಸಂಘವು ಸ್ವಾಗತಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಬ್ಲ್ಯೂ.ಕೇಸಿ ಸಿಯಾಚಿನ್ ಭೇಟಿಗೆ ಪಾಕ್ ಆಕ್ಷೇಪ
ಅಣು ಒಪ್ಪಂದ: ಚೀನಾದ ಒಪ್ಪಿಗೆ ಪಡೆಯಲು ಜರ್ದಾರಿ ವಿಫಲ?
ಥಾಯ್ ಮಾಜಿ ಪ್ರಧಾನಿ ಪ್ರಕರಣ ನ್ಯಾಯಾಂಗ ಪರಾಮರ್ಶೆಗೆ
ಸೋಮಾಲಿಯಾ ಕಡಲ್ಗಳ್ಳರಿಗೆ ಒತ್ತೆ ಹಣ
ಬ್ರಿಟನ್: ಕಠಿಣ ವೀಸಾ ನಿಯಮ ಜಾರಿಗೆ
ಅಮಲೇರಿದ ಮಹಿಳೆಯ ಕಮಾಲು !