ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌ಟಿಟಿಇ ವಿರುದ್ಧ ಕಾರ್ಯಾಚರಣೆ ಸ್ಥಗಿತವಿಲ್ಲ: ಶ್ರೀಲಂಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ವಿರುದ್ಧ ಕಾರ್ಯಾಚರಣೆ ಸ್ಥಗಿತವಿಲ್ಲ: ಶ್ರೀಲಂಕಾ
ಶ್ರೀಲಂಕಾದಲ್ಲಿ ತಮಿಳು ಜನಾಂಗದ ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಕೈಬಿಡುವಂತೆ ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷ ಆಗ್ರಹಿಸುತ್ತಿರುವ ಬೆನ್ನಲ್ಲೇ ಇದೀಗ ಸಮಸ್ಯೆ ರಾಜಕೀಯ ಬಿಕ್ಕಟ್ಟಿಗೆ ಎಡೆಮಾಡಿಕೊಟ್ಟಿದೆ.

ಇದು ದೇಶದ ಆಂತರಿಕ ವಿಷಯ ಎಂದು ಸ್ಪಷ್ಟಪಡಿಸಿರುವ ಶ್ರೀಲಂಕಾ, ಈ ಬಗ್ಗೆ ಭಾರತ ಮೂಗುತೂರಿಸುವ ಅಗತ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಎಲ್‌ಟಿಟಿಇ ವಿರುದ್ಧದ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಶನಿವಾರ ಹೇಳಿದೆ.

ಶ್ರೀಲಂಕಾದಲ್ಲಿರುವ ತಮಿಳು ಸಂಸದರು, ಲಂಕಾ ಸರ್ಕಾರದ ಕಾರ್ಯಾಚರಣೆ ವಿರುದ್ಧ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ಏತನ್ಮಧ್ಯೆ ಶ್ರೀಲಂಕಾ ನಡೆಸುತ್ತಿರುವ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸುವಂತೆ ಒತ್ತಡ ಹೇರಿರುವ ತಮಿಳುನಾಡು ಡಿಎಂಕೆಯ ಏಳು ಮಂದಿ ಕೇಂದ್ರ ಸಚಿವರು ಸೇರಿದಂತೆ ಒಟ್ಟು 14ಮಂದಿ ರಾಜೀನಾಮೆ ನೀಡಿದ್ದಾರೆ.

ಲಂಕಾದಲ್ಲಿ ಮಿಲಿಟರಿ ಕಾರ್ಯಾಚರಣೆ ಮೂಲಕ ತಮಿಳರ ನರಮೇಧ ನಡೆಸುತ್ತಿರುವುದಾಗಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಭಾರತ ಮಧ್ಯಸ್ಥಿಕೆ ವಹಿಸಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕೆಂದು ಒತ್ತಡ ಹೇರಿತ್ತು.

ಆದರೆ ನಮ್ಮದು ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆ ವಿನಃ, ತಮಿಳು ಜನಾಂಗದ ಮೇಲೆ ಯಾವುದೇ ಕಾರ್ಯಾಚರಣೆ ನಡೆಸಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ಮಹೇಂದ್ರ ರಾಜಪಕ್ಸೆ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದರು. ಅಲ್ಲದೇ ಈ ಬಗ್ಗೆ ತಮಿಳುನಾಡು ಸರ್ಕಾರ ನಮ್ಮ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಯಾವುದೇ ಒತ್ತಡದ ತಂತ್ರವನ್ನು ಅನುಸರಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನ: ವಿದೇಶಿ ಪತ್ರಕರ್ತರಿಗೆ ಮುಕ್ತ ಸ್ವಾತಂತ್ರ್ಯ ವಿಸ್ತರಣೆ
ಡಬ್ಲ್ಯೂ.ಕೇಸಿ ಸಿಯಾಚಿನ್ ಭೇಟಿಗೆ ಪಾಕ್ ಆಕ್ಷೇಪ
ಅಣು ಒಪ್ಪಂದ: ಚೀನಾದ ಒಪ್ಪಿಗೆ ಪಡೆಯಲು ಜರ್ದಾರಿ ವಿಫಲ?
ಥಾಯ್ ಮಾಜಿ ಪ್ರಧಾನಿ ಪ್ರಕರಣ ನ್ಯಾಯಾಂಗ ಪರಾಮರ್ಶೆಗೆ
ಸೋಮಾಲಿಯಾ ಕಡಲ್ಗಳ್ಳರಿಗೆ ಒತ್ತೆ ಹಣ
ಬ್ರಿಟನ್: ಕಠಿಣ ವೀಸಾ ನಿಯಮ ಜಾರಿಗೆ