ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ.
ಆದರೆ ಇದೀಗ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಫಾರ್ಮ್ ಹೌಸ್‌ಗೆ ತೆರಳಿದ ಬಳಿಕ,ಅಧಿಕೃತವಾಗಿ ರಾಜಕೀಯಕ್ಕೆ ಇಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಆ ನಿಟ್ಟಿನಲ್ಲಿ ಆರ್ಮಿ ನಿವಾಸವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶ ತನಗಿಲ್ಲ ಎಂದು ಮುಷ್ ಸ್ಪಷ್ಟಪಡಿಸಿದ್ದಾರೆ.
ಆರ್ಮಿ ನಿವಾಸ ರಾಜಕೀಯ ಕಾರ್ಯಾಲಯವನ್ನಾಗಿ ಮಾಡುವುದು ತನಗೆ ಬೇಕಾಗಿಲ್ಲ ಎಂದು ಹೇಳಿರುವ ಮುಷರ್ರಫ್, ರಾಜಕೀಯ ಮುಖ್ಯಸ್ಥಳ ಏನೀದ್ದರೂ ಅದು ತಾನು ನೂತನಾಗಿ ತೆರಳಿರುವ ಫಾರ್ಮ್ ಹೌಸ್‌ನಲ್ಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಮಾಧ್ಯಮವೊಂದರ ವರದಿ ಬಹಿರಂಗಪಡಿಸಿದೆ.
ಮಾಜಿ ಅಧ್ಯಕ್ಷರನ್ನು ಭೇಟಿಯಾದ ಕೆಲವರಲ್ಲಿ ಈ ಇಚ್ಛೆಯನ್ನು ವ್ಯಕ್ತಪಡಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಇವೆಲ್ಲವೂ ಚೌಧುರಿ ಅವರ ಮೇಲೆ ಅವಲಂಬಿತವಾಗಿದೆ. ಚೌಧುರಿ ಪಿಎಂಎಲ್ ಕ್ಯೂನ ಪ್ರಭಾರ ನೇತಾರರಾಗಿದ್ದು. ಅವರ ಪಕ್ಷ ಮುಷ್ ಅವರ ಇಚ್ಛೆಯನ್ನು ಈಡೇರಿಸಿಕೊಳ್ಳಲು ಅವಕಾಶ ನೀಡುತ್ತದೆಯೇ ಎಂಬುದರ ಮೇಲೆ ನಿರ್ಧಾರವಾಗಲಿದೆ ಎಂದು ವರದಿ ಹೇಳಿದೆ. |