ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ರಾಜಕೀಯಕ್ಕೆ ಮರಳುವುದಿಲ್ಲ: ಮುಷರಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯಕ್ಕೆ ಮರಳುವುದಿಲ್ಲ: ಮುಷರಫ್
ರಾಜಕೀಯಕ್ಕೆ ಮರಳುವ ವದಂತಿಗಳನ್ನು ತಳ್ಳಿಹಾಕಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, ತಾನು ಮತ್ತೆ ರಾಜಕೀಯ ಪ್ರವೇಶ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

ರಕ್ತ ರಹಿತ ಕ್ಷಿಪ್ರಕ್ರಾಂತಿಯ ಮೂಲಕ ಒಂಬತ್ತು ವರ್ಷಗಳ ಹಿಂದೆ ನವಾಜ್ ಶರೀಫ್ ಅವರಿಂದ ಅಧಿಕಾರ ಕಸಿದುಕೊಂಡು ರಾಷ್ಟ್ರದ ಉನ್ನತ ಹುದ್ದೆ ಅಲಂಕರಿಸಿದ್ದ ಮುಷರಫ್ ಇತ್ತೀಚಿಗೆ ತೀವ್ರ ರಾಜಕೀಯ ಒತ್ತಡಗಳ ಕಾರಣ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮುಷರಫ್ ಅವರು ರಾಜಕೀಯ ಮರುಪ್ರವೇಶ ಮಾಡಬೇಕು ಎಂದು ಸೇನಾಧಿಕಾರಿಗಳು ಹಾಗೂ ಜನತೆ ಒತ್ತಡ ಹೇರುತ್ತಿದ್ದಾರೆಂಬ ವರದಿಗಳನ್ನು ತಳ್ಳಿಹಾಕಿದ ಅವರು ರಾಜಕೀಯದಿಂದ ದೂರವಿರಲು ಬಯಸಿರುವುದಾಗಿ ಹೇಳಿದ್ದಾರೆ.

ಅಗಸ್ಟ್‌ ತಿಂಗಳಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅವರು ರಾವಲ್ಪಿಂಡಿಯಲ್ಲಿರುವ ಆರ್ಮಿಹೌಸ್‌ನಿಂದ ಹೊರಗೆ ಕಾಣಿಸಿಕೊಂಡಿಲ್ಲವೆಂದು ಸೇನಾಮೂಲಗಳು ತಿಳಿಸಿವೆ.

ಕೆಲ ದಿನಗಳಲ್ಲಿ ತಮ್ಮ ವಾಸ್ತವ್ಯವನ್ನು ಇಸ್ಲಾಮಾಬಾದ್ ನಗರದ ಹೊರವಲಯದಲ್ಲಿರುವ ತಮ್ಮ ಸ್ವಂತ ನಿವಾಸಕ್ಕೆ ಬದಲಾಯಿಸಲಿದ್ದು, ತಾನು ರಾಜಕೀಯ ಚಟುವಟಿಕೆಗಳಿಂದ ದೂರವಿರುವುದಾಗಿ ಮುಷರಫ್ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಣು ಘಟಕ ನಿರ್ಮಾಣಕ್ಕೆ ಪಾಕ್-ಚೀನಾ ಒಪ್ಪಂದ
ರಾಜಕೀಯ ಅಖಾಡಕ್ಕಿಳಿಯಲು ಮುಷ್ ನಿರ್ಧಾರ
ಪಾಕ್ ವಾಯುಪಡೆಯಿಂದ 60 ಉಗ್ರರ ಹತ್ಯೆ
ಎಲ್‌ಟಿಟಿಇ ವಿರುದ್ಧ ಕಾರ್ಯಾಚರಣೆ ಸ್ಥಗಿತವಿಲ್ಲ: ಶ್ರೀಲಂಕಾ
ಚೀನ: ವಿದೇಶಿ ಪತ್ರಕರ್ತರಿಗೆ ಮುಕ್ತ ಸ್ವಾತಂತ್ರ್ಯ ವಿಸ್ತರಣೆ
ಡಬ್ಲ್ಯೂ.ಕೇಸಿ ಸಿಯಾಚಿನ್ ಭೇಟಿಗೆ ಪಾಕ್ ಆಕ್ಷೇಪ