ಇಸ್ಲಾಮಾಬಾದ್: ಅಪ್ಘಾನ್ ಗಡಿ ಪ್ರದೇಶದಲ್ಲಿರುವ ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ಪಾಕಿಸ್ತಾನವು ಸೇನಾಕಾರ್ಯಚರಣೆ ಮುಂದುವರಿಸಿರುವ ನಡುವೆಯೇ, ಉಗ್ರವಾದಿ ಸಂಘಟನೆ ತಾಲಿಬಾನ್, ಪಾಕಿಸ್ತಾನ ಸರಕಾರದೊಂದಿಗೆ ಮಾತುಕತೆಯ ಹೊಸಪ್ರಸ್ತಾಪವನ್ನು ಇರಿಸಿದೆ. ಆದರೆ ಅದು ತಾನು ಶಸ್ತ್ರಾಸ್ತ್ರ ಕೆಳಗಿಡುವುದಿಲ್ಲ ಎಂದು ಹೇಳಿದೆ.
ತಮ್ಮ ವಿರುದ್ಧದ ಸೇನಾಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದಲ್ಲಿ ಬೇಷರತ್ ಮಾತುಕತೆಗೆ ಮುಂದಾಗುವ ತಾಲಿಬಾನ್ ಆಹ್ವಾನಕ್ಕೆ, ಪಾಕಿಸ್ತಾನಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸೇರಿದಂತೆ ಉನ್ನತ ನಾಯಕರು ಪ್ರತಿಕ್ರಿಯಿಸಿದ್ದು, ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿರಿಸಿದಲ್ಲಿ ಮಾತ್ರ ಮಾತುಕತೆ ನಡೆಯಬಹುದು ಎಂದು ಹೇಳಿದ್ದಾರೆ.
ವಿವಾದಗಳ ಇತ್ಯರ್ಥಕ್ಕೆ ಮಾತುಕತೆಯು ಉತ್ತಮ ಆಯ್ಕೆ ಎಂದು ತೆಹ್ರಿಕ್-ಇ-ತಾಲಿಬಾನ್‌ನ ಪಾಕಿಸ್ತಾನಿ ವಕ್ತಾರ ಮೌಲ್ವಿ ಒಮರ್ ಪೇಶಾವರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಕ್ಪೋಬರ್ 15ರ ಮಾತುಕತೆ ಪ್ರಸ್ತಾಪವನ್ನು ಪುನರುಚ್ಚರಿಸಿರುವ ಓಮರ್, ಮಾತುಕತೆಗೆ ಮುನ್ನ ಉಗ್ರರ ವಿರುದ್ಧ ಸೇನಾಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದ್ದಾರೆ. |