ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌‌ಟಿಟಿಇ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ:ಶ್ರೀಲಂಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌‌ಟಿಟಿಇ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ:ಶ್ರೀಲಂಕಾ
ತನ್ನ ಎಲ್‌ಟಿಟಿಇ ಸೇನೆ ಸಂಪೂರ್ಣವಾಗಿ ನಾಶವಾಗುತ್ತಿದೆ ಎಂಬ ಭಯದ ಹಿನ್ನೆಲೆಯಲ್ಲಿ, ಇದೀಗ ಎಲ್‌ಟಿಟಿಇ ಮುಖಂಡರು ತಮಿಳುನಾಡಿನ ನಾಯಕರಿಂದ ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮುಂದಾಗಿರುವುದಾಗಿ ಶ್ರೀಲಂಕಾ ಸರ್ಕಾರದ ರಕ್ಷಣಾ ಕಾರ್ಯದರ್ಶಿ ಗೊತಭಾಯಿ ರಾಜಪಕ್ಸೆ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿರುವ ತಮಿಳರ ಪರವಾಗಿ ದಿಢೀರನೆ ಹೇಳಿಕೆ ನೀಡುತ್ತಿರುವ ತಮಿಳುನಾಡು ನಾಯಕರು ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡದ ತಂತ್ರ ಹೇರುವಂತೆ ಎಲ್‌ಟಿಟಿಇ ಕಸರತ್ತು ನಡೆಸಿದೆ. ಆದರೆ ಎಲ್‌ಟಿಟಿಇ ಸೇನಾ ದಾಳಿಗಳಿಂದ ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಗೊತಭಾಯಿ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರವಷ್ಟೇ ಈ ವಿಷಯದ ಕುರಿತು ಶ್ರೀಲಂಕಾದ ಪ್ರಧಾನಿ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು.

ಎಲ್‌ಟಿಟಿಇ ಮೇಲೆ ದಾಳಿ ನಡೆಸುವ ಭರದಲ್ಲಿ ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆಗೆ ಧಕ್ಕೆಯಾಗಬಾರದು ಎಂದು ಅವರು ಈ ಸಂದರ್ಭ ತಮಿಳರ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದ್ದರು.

ಶ್ರೀಲಂಕಾ ಸರ್ಕಾರ ಕೂಡಲೇ ಎಲ್‌ಟಿಟಿಇ ಮೇಲಿನ ಸೇನಾ ದಾಳಿ ಸ್ಥಗಿತಗೊಳಿಸಬೇಕು. ಈ ದಿಸೆಯಲ್ಲಿ ನಿರ್ದಿಷ್ಟ ಚೌಕಟ್ಟಿನ ನಡುವೆ ರಾಜಕೀಯ ಶಾಂತಿ ಮಾತುಕತೆಗಳು ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ತಮಿಳರ ಅಥವಾ ಬೇರಾವುದೇ ಸಮುದಾಯದ ರಕ್ಷಣೆ ಪ್ರಶ್ನೆ ಬಂದಾಗ ಅವುಗಳನ್ನು ರಾಜಕೀಯ ಮಾತುಕತೆಯಿಂದ ಬಗೆಹರಿಸಿಕೊಳ್ಳುತ್ತೇವೆ ಎಂೆದು ಈಗಾಗಲೇ ಶ್ರೀಲಂಕಾ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತೆ ಮಾತುಕತೆಯ ಪ್ರಸ್ತಾಪವಿಟ್ಟ ತಾಲಿಬಾನ್
ರಾಜಕೀಯಕ್ಕೆ ಮರಳುವುದಿಲ್ಲ: ಮುಷರಫ್
ಅಣು ಘಟಕ ನಿರ್ಮಾಣಕ್ಕೆ ಪಾಕ್-ಚೀನಾ ಒಪ್ಪಂದ
ರಾಜಕೀಯ ಅಖಾಡಕ್ಕಿಳಿಯಲು ಮುಷ್ ನಿರ್ಧಾರ
ಪಾಕ್ ವಾಯುಪಡೆಯಿಂದ 60 ಉಗ್ರರ ಹತ್ಯೆ
ಎಲ್‌ಟಿಟಿಇ ವಿರುದ್ಧ ಕಾರ್ಯಾಚರಣೆ ಸ್ಥಗಿತವಿಲ್ಲ: ಶ್ರೀಲಂಕಾ