ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕಪ್ಪು ಜನಾಂಗದ, ಡೆಮೋಕ್ರೆಟಿಕ್‌ನ ಬರಾಕ್ ಒಬಾಮ ಅವರೇ ಅಮೆರಿಕದ ಅಧ್ಯಕ್ಷ ಪಟ್ಟವನ್ನು ಏರಲಿದ್ದಾರೆ ಎಂದು ಅಮೆರಿಕದ ಮಾಜಿ ಕಾರ್ಯದರ್ಶಿ ಕೋಲಿನ್ ಪೊವೆಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬರಾಕ್ ಅವರು ವಿಭಿನ್ನ ವ್ಯಕ್ತಿತ್ವದ ಹಾಗೂ ಪಾರದರ್ಶಕ ವ್ಯಕ್ತಿಯಾಗಿದ್ದಾರೆ ಎಂದು ರಿಪಬ್ಲಿಕನ್ ಪೊವೆಲ್ ಅವರು ಚಾನೆಲ್‌ವೊಂದರ ವರದಿ ತಿಳಿಸಿದೆ.
ನೇರ ನಡೆ-ನುಡಿಯ ಅವರು ಬುದ್ದಿಜೀವಿಯಂತೆ ಕಾಣಿಸುತ್ತಾರೆ. ಅವರು ಸಾಗುತ್ತಿರುವ ಹಾದಿ ನೋಡಿದರೆ ನಿಜಕ್ಕೂ ಅವರು ನವೆಂಬರ್ 4ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಜಯಭೇರಿ ಗಳಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ರಿಪಬ್ಲಿಕನ್‌ನ ಅಧ್ಯಕ್ಷ ಸ್ಥಾನರ್ಥಿಯಾಗಿರುವ 71ರ ಹರೆಯದ ಜಾನ್ ಮೆಕೈನ್ ಅವರು, ನಾಮಿನಿಯಾನಿಗಿ 44ರ ಹರೆಯದ ಸಾರಾ ಪಾಲಿನ್ ಅವರನ್ನು ಯಾಕೆ ಆಯ್ಕೆಮಾಡಿಕೊಂಡರೋ ಎಂದು ಪ್ರಶ್ನಿಸಿರುವ ಪೊವೆಲ್, ಆಕೆ ಅಧ್ಯಕ್ಷಗಾದಿಯನ್ನು ಏರುವ ಸಾಧ್ಯತೆ ಇಲ್ಲ ಎಂದು ಹೇಳಿದರು.
ಈಗಾಗಲೇ ಮೆಕೈನ್ ಅವರ ಕೆಲವು ತಂತ್ರಗಾರಿಕೆಯಿಂದ ಪಾಲಿನ್ ಬೇಸರಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದು, ಈ ಎಲ್ಲಾ ಅಂಶ ಒಬಾಮ ಅವರನ್ನು ಅಧ್ಯಕ್ಷಗಾದಿಗೆ ಏರಿಸುವಲ್ಲಿ ನೆರವಾಗಲಿದೆ ಎಂದು ಭವಿಷ್ಯ ನುಡಿದರು. |