ಅವಸಾನದ ಅಂಚಿನಲ್ಲಿರುವ ತಮಿಳು ಬಂಡುಕೋರ ಸಂಘಟನೆ (ಎಲ್‌ಟಿಟಿಇ) ಇದೀಗ ವಿಷಾನಿಲ ಪ್ರಯೋಗಕ್ಕೆ ಮುಂದಾಗಿದೆ ಎಂದು ಶ್ರೀಲಂಕಾ ಸೋಮವಾರ ಗಂಭೀರವಾಗಿ ಆರೋಪಿಸಿದೆ.
ಶ್ರೀಲಂಕಾ ಸೈನಿಕ ಕಾರ್ಯಾಚರಣೆಯಿಂದ ಕಂಗಾಲಾಗಿರುವ ಎಲ್‌ಟಿಟಿಇ ತಮಿಳುನಾಡಿನ ರಾಜಕೀಯ ಮುಖಂಡರ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸುತ್ತಿದೆ ಎಂದು ಅಧ್ಯಕ್ಷ ರಾಜಪಕ್ಸೆ ಆರೋಪಿಸಿದ್ದಾರೆ.
ಆದರೆ ಎಲ್‌ಟಿಟಿಇ ಅವಸಾನ ಸನ್ನಿಹಿತವಾಗುತ್ತಿರುವ ಭಯದಿಂದ ವಿಷಾನಿಲ ಪ್ರಯೋಗದಂತಹ ಭೀಭತ್ಸ ಕೃತ್ಯ ಕೈಹಾಕಿರುವುದಾಗಿ ಶ್ರೀಲಂಕಾ ಆತಂಕ ವ್ಯಕ್ತಪಡಿಸಿದೆ.
ಅಲ್ಲದೇ ಏತನ್ಮಧ್ಯೆ ಯಾವುದೇ ಕಾರಣಕ್ಕೂ ಶ್ರೀಲಂಕಾ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಲಂಕಾದಲ್ಲಿ ತಮಿಳರನ್ನು ರಕ್ಷಿಸಲಾಗುತ್ತಿದೆ. ಆದರೆ ತಮಿಳು ಬಂಡುಕೋರರ ವಿರುದ್ಧದ ನಮ್ಮ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಲಂಕಾ ಪ್ರತಿಕ್ರಿಯಿಸಿದೆ.
ಶ್ರೀಲಂಕಾದಲ್ಲಿ ತಮಿಳು ಜನಾಂಗದ ಮಾರಣಹೋಮ ನಡೆಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಭಾರತ ಕೂಡಲೇ ಮಧ್ಯಪ್ರವೇಶಿಸಿ ಲಂಕಾ ಸರ್ಕಾರಕ್ಕೆ ಮನವಿ ಮಾಡಿ, ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವಂತೆ ತಮಿಳುನಾಡು ಸರ್ಕಾರ ಆಗ್ರಹಿಸಿತ್ತು. |