ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್: ವೈಮಾನಿಕ ದಾಳಿಗೆ 6 ಉಗ್ರರು ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್: ವೈಮಾನಿಕ ದಾಳಿಗೆ 6 ಉಗ್ರರು ಬಲಿ
ಅಫಘಾನಿಸ್ತಾನದ ಗಡಿಭಾಗದ ತಾಲಿಬಾನ್ ಕಾರ್ಯಸ್ಥಾನದ ಬಾಜೌರ್ ಪ್ರದೇಶದ ಮೇಲೆ ಸೋಮವಾರ ಪಾಕ್‌ನ ಫೈಟರ್ ಜೆಟ್ ವಿಮಾನ ದಾಳಿಗೆ ಕನಿಷ್ಠ ಆರು ಮಂದಿ ಉಗ್ರರು ಹತರಾಗಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಬಾಜೌರ್ ಜಿಲ್ಲೆಯ ಚಾರ್ಮಾಂಗ್, ಲೊಯ್‌ಸಾಮ್ ಪ್ರದೇಶಗಳಲ್ಲಿಯೂ ಅಡಗಿರುವ ಉಗ್ರರ ತಾಣದ ಮೇಲೆ ವೈಮಾನಿಕ ದಾಳಿ ನಡೆಸಲಾಗಿದ್ದು, ಇವೆಲ್ಲವೂ ತಾಲಿಬಾನ್ ಹಿಡಿತದ ಪ್ರದೇಶಗಳಾಗಿವೆ.

ಏಕಕಾಲದಲ್ಲಿ ನಡೆದ ಬಾಂಬ್ ದಾಳಿಯಿಂದಾಗಿ ಉಗ್ರರ ನೆಲೆಗಳು ನಾಶಗೊಂಡಿರುವುದಾಗಿ ಟಿವಿ ಚಾನೆಲ್‌ವೊಂದರ ವರದಿ ತಿಳಿಸಿದೆ. ಆದರೆ ಅಧಿಕೃತವಾಗಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿಲ್ಲ.

ಆದರೆ ಚಾನೆಲ್‌ ವರದಿಯ ಪ್ರಕಾರ ಆರು ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿಯೂ ಶಂಕಿಸಿದೆ.

ಕಳೆದ ಕೆಲವು ದಿನಗಳಿಂದ ನಾರ್ಥ್ ವೆಸ್ಟ್ ಫ್ರಂಟಿಯರ್ ಪ್ರೊವಿನ್ಸ್‌ನ ಸ್ವಾತ್ ಕಣಿವೆ ಮತ್ತು ಬಾಜೌರ್ ಪ್ರದೇಶದಲ್ಲಿ ಪಾಕ್ ಪೈಟರ್ ಜೆಟ್ ಮತ್ತು ಗನ್ ಶಿಪ್ ಹೆಲಿಕ್ಟಾಪರ್ ಮೂಲಕ ತೀವ್ರ ದಾಳಿ ನಡೆಸುತ್ತಿರುವುದಾಗಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌ಟಿಟಿಇಯಿಂದ ವಿಷಾನಿಲ ಪ್ರಯೋಗ: ಶ್ರೀಲಂಕಾ
ಒಬಾಮ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ:ಪೊವೆಲ್
ಎಲ್‌‌ಟಿಟಿಇ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ:ಶ್ರೀಲಂಕಾ
ಮತ್ತೆ ಮಾತುಕತೆಯ ಪ್ರಸ್ತಾಪವಿಟ್ಟ ತಾಲಿಬಾನ್
ರಾಜಕೀಯಕ್ಕೆ ಮರಳುವುದಿಲ್ಲ: ಮುಷರಫ್
ಅಣು ಘಟಕ ನಿರ್ಮಾಣಕ್ಕೆ ಪಾಕ್-ಚೀನಾ ಒಪ್ಪಂದ