ನೇಪಾಳದ ಸಿಪಿಎನ್(ಮಾವೋ) ಮತ್ತು ಸಿಪಿಎನ್(ಯುಎಂಎಲ್) ಪಕ್ಷಗಳು ಇದೀಗ ಅಂತಿಮವಾಗಿ ಒಮ್ಮತಕ್ಕೆ ಬಂದ ನಿಟ್ಟಿನಲ್ಲಿ ಪ್ರಸಕ್ತ ಸಚಿವ ಸಂಪುಟವನ್ನು ವಿಸ್ತರಿಸಲು ಹಾಗೂ ರಾಜಕೀಯ ಬಿಕ್ಕಟ್ಟು ಉದ್ಭವವಾದಾಗ ಸರ್ಕಾರಕ್ಕೆ ಸಲಹೆ ನೀಡುವ ಅಂಗವಾಗಿ ರಾಜಕೀಯ ಸಮಿತಿಯನ್ನು ರಚಿಸಲು ಅನುಮತಿ ನೀಡಿದೆ.
ಈ ಕುರಿತು ಎರಡು ಪಕ್ಷಗಳ ಮುಖಂಡರು ಪ್ರಧಾನಿ ಪ್ರಚಂಡ ಅವರ ನಿವಾಸದಲ್ಲಿ ಸೋಮವಾರ ಮಾತುಕತೆ ನಡೆಸಿದರು. ಅಲ್ಲದೇ ಸಂವಿಧಾನಾತ್ಮಕ ಆಡಳಿತದ ಮುಂದುವರಿಕೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಅನುಕೂಲವಾಗುವ ದೃಷ್ಟಿಯಿಂದ ನೇಪಾಳಿ ಕಾಂಗ್ರೆಸ್ ಮನವೊಲಿಸುವುದಾಗಿ ನಿರ್ಧರಿಸಲಾಯಿತು.
ಮಾಜಿ ಯುಎಮ್‌ಎಲ್ ಪ್ರಧಾನ ಕಾರ್ಯದರ್ಶಿ ಮಾಧವ್ ಕುಮಾರ್ ಅವರ ನೇತೃತ್ವದಲ್ಲಿ ಸರಕಾರದ ಎಲ್ಲಾ ಪಕ್ಷಗಳ ಅಂಗವಾಗಿ ರಾಜಕೀಯ ಸಮಿತಿಯ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಲು ಎರಡು ಪಕ್ಷಗಳು ಒಪ್ಪಿಗೆ ನೀಡಿದವು.
ಅಲ್ಲದೇ .ಯುವ ಘಟಕವಾದ ಯಂಗ್ ಕಮ್ಯೂನಿಷ್ಟ್ ಲೀಗ್ ಮತ್ತು ಯೂತ್ ಫೋರ್ಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲು ಪ್ರಮುಖವಾಗಿ ಈ ಸಭೆಯಲ್ಲಿ ಚರ್ಚಿಸಲಾಯಿತು.
ಅದರಂತೆ ತೆರವಾದ ಸಂವಿಧಾನ ಸಮಿತಿಗೆ ಹುದ್ದೆಯನ್ನು ಭರ್ತಿ ಮಾಡುವಂತೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೇ ಆಂತರಿಕ ಸಂವಿಧಾನ ರಚನೆಯ ಸಮಿತಿ ರಚನೆಗೆ ಸಂಬಂಧಿಸಿದಂತೆ ಪ್ರಧಾನಿ ಪ್ರಚಂಡ ಅವರು ಇಂದು ಸಂಜೆ ನೇಪಾಳಿ ಕಾಂಗ್ರೆಸ್ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ. |