ಬೀಜಿಂಗ್ ಒಲಿಂಪಿಕ್ ವೇಳೆ ಬಾಂಬ್ ದಾಳಿ ಬೆದರಿಕೆಯೊಡ್ಡಿದ್ದ ಎಂಟು ಶಂಕಿತ ಭಯೋತ್ಪಾದಕರ ಹೆಸರನ್ನು ಚೀನಾ ಪ್ರಕಟಿಸಿದ್ದು, ಈ ಭಯೋತ್ಪಾದಕರನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡುವಂತೆ ಇತರ ದೇಶಗಳಿಗೆ ಮನವಿ ಮಾಡಿದೆ.
ಹೆಸರು ಬಹಿರಂಗಗೊಂಡ ಎಂಟು ಮಂದಿ ಭಯೋತ್ಪಾದಕರು ಪೂರ್ವ ಟರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್‌ನ ಸದಸ್ಯರಾಗಿದ್ದಾರೆ ಎಂದು ಸಾರ್ವಜನಿಕ ಭದ್ರತಾ ನಿಗಮದ ವಕ್ತಾರ ವು ಹೇಪಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೀಜಿಂಗ್ ಒಲಿಂಪಿಕ್‌ನ್ನು ಗುರಿಯಾಗಿಸಿ, ಬಾಂಬ್ ದಾಳಿಯನ್ನು ನಡೆಸಲು ಮತ್ತು ಒಲಿಂಪಿಕ್ ನಡೆಯುವ ಸ್ಥಳದಲ್ಲಿ ವಿವಿಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಈ ಉಗ್ರರು ಸಂಚು ರೂಪಿಸಿದ್ದರು ಎಂದು ಅವರು ಹೇಳಿದ್ದಾರೆ. |