ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಫೈಯರಿಂಗ್ ಸ್ಕ್ವಾಡ್ ಶಿಕ್ಷೆ ಸಂವಿಧಾನ ಬದ್ಧ:ಇಂಡೋನೇಷ್ಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೈಯರಿಂಗ್ ಸ್ಕ್ವಾಡ್ ಶಿಕ್ಷೆ ಸಂವಿಧಾನ ಬದ್ಧ:ಇಂಡೋನೇಷ್ಯಾ
ಆರೋಪಿಗಳಿಗೆ ಗುಂಡು ಹೊಡೆದು ಸಾಯಿಸುವುದನ್ನು ಇಂಡೋನೇಷ್ಯಾ ಸಂವಿಧಾನ ನಿಷೇಧ ಒಡ್ಡಲಾರದು ಎಂದು ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪನ್ನು ನೀಡಿದೆ.

2002ರಲ್ಲಿ ನಡೆದ ಬಾಲಿ ನೈಟ್ ಕ್ಲಬ್ ಬಾಂಬ್ ಸ್ಫೋಟ ದಾಳಿ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಮೂರು ಆರೋಪಿಗಳ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮರಣದಂಡನೆ ಶಿಕ್ಷೆಗೊಳಗಾದ ಆರೋಪಿಗಳನ್ನು ಗುಂಡು ಹೊಡೆದು ಸಾಯಿಸುವುದು ಇಸ್ಲಾಂ ಧೋರಣೆಗೆ ವಿರುದ್ಧವಾದುದು ಮತ್ತು ಇದು ಅಮಾನವೀಯ ಕೃತ್ಯ ಎಂಬ ಆರೋಪಿಗಳ ಪರ ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದೆ.

ಯಾವುದೇ ನೋವನ್ನು ಅನುಭವಿಸಿದೆ ಮರಣದಂಡನೆಯನ್ನು ನೀಡುವ ಬದಲಿ ವಿಧಾನ ಇಲ್ಲ ಎಂಬುದಾಗಿ ನ್ಯಾಯಾಧೀಶರಾದ ಮೊಹಮ್ಮದ್ ಮಾಹ್‌ಫುದ್ ತಿಳಿಸಿದರು.

ಇಂಡೋನೇಷ್ಯಾದ ಕಾನೂನು ಪ್ರಕಾರ ಮರಣದಂಡನೆ ಶಿಕ್ಷೆಗೊಳಗಾದವರು ಫೈಯರಿಂಗ್ ಸ್ಕ್ವಾಡ್‌‌ನಿಂದಲೇ ಶಿಕ್ಷೆ ಜಾರಿಗೊಳಿಸಲಾಗುವುದು, ಇದನ್ನು ಆರೋಪಿಗಳಿಗೆ ನೀಡುವ ಚಿತ್ರಹಿಂಸೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಒಂಬತ್ತು ಮಂದಿಯನ್ನೊಳಗೊಂಡ ನ್ಯಾಯಾಧೀಶರ ಆಯೋಗ ಅಭಿಪ್ರಾಯಪಟ್ಟಿದೆ.

2002ರ ಅಕ್ಪೋಬರ್ ತಿಂಗಳಿನಲ್ಲಿ ಬಾಲಿ ನೈಟ್ ಕ್ಲಬ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ 202ಮಂದಿ ಬಲಿಯಾಗಿದ್ದರು. ಇದರಲ್ಲಿ 88ಮಂದಿ ಆಸ್ಟ್ರೇಲಿಯಾದ ಪ್ರವಾಸಿಗರು ಸೇರಿದ್ದರು.

ಪ್ರಕರಣದಲ್ಲಿ ಅಮ್ರೋಜಿ ನೂರ್‌‌ಹ್ಯಾಸಿಮ್, ಅಲಿ ಗುಫ್ರಾನ್ ಮತ್ತು ಇಮಾಮ್ ಸಾಮುದ್ರಾ ಆರೋಪಿಗಳಾಗಿದ್ದು, ನ್ಯಾಯಾಲಯ ಮೂವರಿಗೂ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಲಿಂಪಿಕ್ ಸ್ಫೋಟ ಸಂಚು:ಉಗ್ರರ ಹೆಸರು ಪ್ರಕಟ
ಸಂಪುಟ ವಿಸ್ತರಣೆಗೆ ನೇಪಾಳ ಪಕ್ಷ ಅಸ್ತು
ಪಾಕ್: ವೈಮಾನಿಕ ದಾಳಿಗೆ 6 ಉಗ್ರರು ಬಲಿ
ಎಲ್‌ಟಿಟಿಇಯಿಂದ ವಿಷಾನಿಲ ಪ್ರಯೋಗ: ಶ್ರೀಲಂಕಾ
ಒಬಾಮ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ:ಪೊವೆಲ್
ಎಲ್‌‌ಟಿಟಿಇ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ:ಶ್ರೀಲಂಕಾ