ಭಯೋತ್ಪಾದನಾ ಕಾಯ್ದೆಯಡಿಯಲ್ಲಿ ಐದು ಮಂದಿ ಶಂಕಿತರನ್ನು ಬಂಧಿಸಿರುವುದಾಗಿ ಬರ್ಮಿಂಗ್‌ಹ್ಯಾಮ್ ಪೊಲೀಸರು ತಿಳಿಸಿದ್ದಾರೆ.
ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಶಂಕಿತ ಐದು ಮಂದಿಯನ್ನು ಭಯೋತ್ಪಾದನಾ ಕಾಯ್ದೆಯಡಿಯಲ್ಲಿ ಸೆರೆ ಹಿಡಿದಿರುವುದಾಗಿ ವೆಸ್ಟ್ ಮಿಡ್‌ಲ್ಯಾಂಡ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬಂಧಿತರೆಲ್ಲರು 29ರಿಂದ 36ರ ವಯಸ್ಸಿನವರಾಗಿದ್ದಾರೆಂದು ಅವರು ವಿವರಿಸಿದರು.
ದೀರ್ಘಕಾಲದ ತನಿಖೆಯ ನಂತರ ಈ ಶಂಕಿತರನ್ನು ಬಂಧಿಸಿರುವುದಾಗಿ ತಿಳಿಸಿದ ಪೊಲೀಸ್ ಅಧಿಕಾರಿಗಳು, ಯಾವುದೇ ಸಾರ್ವಜನಿಕ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರಸ್ತುತವಾಗಿ ಅವರನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. |