ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಪಹೃತ ಭಾರತೀಯ ಹಡಗು ಸಿಬ್ಬಂದಿಗಳ ರಕ್ಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪಹೃತ ಭಾರತೀಯ ಹಡಗು ಸಿಬ್ಬಂದಿಗಳ ರಕ್ಷಣೆ
ಸೋಮಾಲಿಯಾದಲ್ಲಿ ಭಾರತದ ಮತ್ತೊಂದು ಹಡಗನ್ನು ಕಡಲ್‌ಗಳ್ಳರು ಅಪಹರಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಸೋಮಾಲಿ ಕರಾವಳಿ ಭದ್ರತಾ ಪಡೆಯ ಸಹಾಯದೊಂದಿಗೆ 13ಮಂದಿ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿರುವುದಾಗಿ ಸೋಮಾಲಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಡಲ್ಗಳ್ಳರು ಮತ್ತು ಕೋಸ್ಟ್ ಗಾರ್ಡ್ ನಡುವೆ ಗುಂಡಿನ ಚಕಮಕಿ ನಡೆಯಿತು. ಇದರಲ್ಲಿ ನಾಲ್ಕು ಮಂದಿ ಕಡಲ್ಗಳ್ಳರನ್ನು ಸೆರೆ ಹಿಡಿದಿದ್ದು,ಉಳಿದ ನಾಲ್ವರು ಪರಾರಿಯಾಗಿರುವುದಾಗಿ ಸೋಮಾಲಿಯಾದ ವಿದೇಶಾಂಗ ಸಚಿವ ಅಲಿ ಅಬ್ದಿ ಹೇಳಿದ್ದಾರೆ.

ಕಳೆದವಾರ ಏಷ್ಯಾದಿಂದ ಸೋಮಾಲಿಯಾದತ್ತ ಹೊರಟಿದ್ದ ಭಾರತದ ಕಾರ್ಗೋ ಹಡಗು ತೆರಳುತ್ತಿದ್ದ ಸಂದರ್ಭದಲ್ಲಿ, ಕಡಲ್ಗಳ್ಳರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಹಡಗಿನಲ್ಲಿ ಒಟ್ಟು 13ಮಂದಿ ಸಿಬ್ಬಂದಿಗಳಿದ್ದರು.

ಈ ವರ್ಷ ಸೋಮಾಲಿಯಾದಲ್ಲಿ ಹಡಗುಗಳ ಮೇಲಿನ ದಾಳಿ ಹೆಚ್ಚುತ್ತಲೇ ಇದ್ದು, ಈವರೆಗೆ ಒಟ್ಟು 30ಹಡಗುಗಳನ್ನು ಅಪಹರಿಸಲಾಗಿತ್ತು. ಅದರಲ್ಲಿ ಒಂಬತ್ತು ಹಡಗುಗಳನ್ನು ಕಡಲ್ಗಳ್ಳರಿಂದ ಮರಳಿ ವಶಪಡಿಸಿಕೊಂಡು,ಇನ್ನೂರು ಸಿಬ್ಬಂದಿಗಳನ್ನು ರಕ್ಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಥಾಯ್ ಮಾಜಿ ಪ್ರಧಾನಿಗೆ 2 ವರ್ಷ ಜೈಲು
ಲಂಡನ್:ಭಯೋತ್ಪಾದನಾ ಕಾಯ್ದೆಯಡಿ ಐವರ ಸೆರೆ
ಬಾಗ್ದಾದ್:ಬಾಂಬ್ ಸ್ಫೋಟಕ್ಕೆ 2 ಬಲಿ
ಮೆಕ್ಸಿಕೋ ಜೈಲಿನಲ್ಲಿ ಹಿಂಸಾಚಾರ-21ಸಾವು
ಫೈಯರಿಂಗ್ ಸ್ಕ್ವಾಡ್ ಶಿಕ್ಷೆ ಸಂವಿಧಾನ ಬದ್ಧ:ಇಂಡೋನೇಷ್ಯಾ
ಒಲಿಂಪಿಕ್ ಸ್ಫೋಟ ಸಂಚು:ಉಗ್ರರ ಹೆಸರು ಪ್ರಕಟ