ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ರೀಲಂಕಾ: ಎಲ್‌ಟಿಟಿಇಯಿಂದ ಮತ್ತೆ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ: ಎಲ್‌ಟಿಟಿಇಯಿಂದ ಮತ್ತೆ ದಾಳಿ
ಶ್ರೀಲಂಕಾ ಮಿಲಿಟರಿ ಎಲ್‌‌ಟಿಟಿಇ ಬಂಡುಕೋರರನ್ನು ಬಗ್ಗುಬಡಿಯುತ್ತಿದ್ದರೆ, ಮತ್ತೊಂದೆಡೆ ತಮಿಳ್ ಟೈಗರ್ ಬಂಡುಕೋರರು ವ್ಯಾಪಾರಿ ಹಡಗಿನ ಮೇಲೆ ಆತ್ಮಹತ್ಯಾ ದಾಳಿ ನಡೆಸಿರುವುದಾಗಿ ಶ್ರೀಲಂಕಾ ಬುಧವಾರ ಆರೋಪಿಸಿದೆ.

ಎಂ.ವಿ.ರುಹುನಾ ಮತ್ತು ಎಂ.ವಿ.ನಿಮಾಲಾವಾ ಮರ್ಚಂಟ್ ಶಿಫ್ ಅನ್ನು ಜಾಫ್ನಾ ಪ್ರದೇಶದ ಸಮೀಪ ಎಲ್‌ಟಿಟಿಇ ಶಸ್ತ್ರ ಸಜ್ಜಿತ ಬೋಟ್‌ಗಳ ಮೂಲಕ ಸುತ್ತುವರಿದು ದಾಳಿ ನಡೆಸಿರುವುದಾಗಿ ಹೇಳಿದೆ.

ಜಾಫ್ನಾ ಪ್ರದೇಶದ ಕಾನ್‌ಕೆಸಾನ್‌ತುರೈ‌‌ನಲ್ಲಿ ಎಲ್‌ಟಿಟಿಇ ಗೆರಿಲ್ಲಾ ಪಡೆ ಮತ್ತು ಶ್ರೀಲಂಕಾ ಮಿಲಿಟರಿ ನಡುವೆ ಗುಂಡಿನ ಚಕಮಕಿ ನಡೆದಿರುವುದಾಗಿ ತಿಳಿಸಿದೆ.

ಎಂ.ವಿ.ನಿಮಾಲಾವಾ ಬೋಟ್ ಸಂಪೂರ್ಣ ಹಾನಿಗೀಡಾಗಿದ್ದು, ಮತ್ತೊಂದು ಬೋಟ್ ಭಾಗಶಃ ಹಾನಿಗೊಂಡಿರುವುದಾಗಿ ರಕ್ಷಣಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಮೊದಲು ಜಾಫ್ನಾ ತಮಿಳು ಬಂಡುಕೋರರ ಹಿಡಿದದಲ್ಲಿತ್ತು, ಆದರೆ ಇದೀಗ ಶ್ರೀಲಂಕಾ ಸೇನಾ ಪಡೆ ತನ್ನ ವಶಕ್ಕೆ ತೆಗೆದುಕೊಳ್ಳವ ಮೂಲಕ ಎಲ್‌ಟಿಟಿಇಯನ್ನು ಬಗ್ಗು ಬಡಿಯುತ್ತಿದೆ. ಆದರೆ ದ್ವೀಪದ ಉಳಿದ ಭಾಗ ಎಲ್‌ಟಿಟಿಇ ಹಿಡಿತದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಪಹೃತ ಭಾರತೀಯ ಹಡಗು ಸಿಬ್ಬಂದಿಗಳ ರಕ್ಷಣೆ
ಥಾಯ್ ಮಾಜಿ ಪ್ರಧಾನಿಗೆ 2 ವರ್ಷ ಜೈಲು
ಲಂಡನ್:ಭಯೋತ್ಪಾದನಾ ಕಾಯ್ದೆಯಡಿ ಐವರ ಸೆರೆ
ಬಾಗ್ದಾದ್:ಬಾಂಬ್ ಸ್ಫೋಟಕ್ಕೆ 2 ಬಲಿ
ಮೆಕ್ಸಿಕೋ ಜೈಲಿನಲ್ಲಿ ಹಿಂಸಾಚಾರ-21ಸಾವು
ಫೈಯರಿಂಗ್ ಸ್ಕ್ವಾಡ್ ಶಿಕ್ಷೆ ಸಂವಿಧಾನ ಬದ್ಧ:ಇಂಡೋನೇಷ್ಯಾ