ಇಲ್ಲಿನ ಸಮೀಪದ ಪ್ರದೇಶವೊಂದರಲ್ಲಿ ಮಂಗಳವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪೂರ್ವ ಜೋಹಾನ್ಸ್ಬರ್ಗ್ನ ರಾಂಡ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಪಿಪೆರ್ ಸಾರಾಟೋಗಾ ಪ್ರೊಪೆಲ್ಲರ್ ವಿಮಾನ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
ದೋಷದ ಮುನ್ಸೂಚನೆ ಅರಿತ ಪೈಲೆಟ್ ಸೆಂಟ್ರಲ್ ಫ್ರೀ ಸ್ಟೇಟ್ ಪ್ರಾಂತ್ಯದ ರನ್ ವೇಯಲ್ಲಿ ತುರ್ತಾಗಿ ವಿಮಾನವನ್ನು ಇಳಿಸುತ್ತಿದ್ದಂತೆಯೇ ನೆಲಕ್ಕಪ್ಪಳಿಸಿದ ಕೂಡಲೇ ಬೆಂಕಿ ಹೊತ್ತಿಕೊಂಡಿರುವುದಾಗಿ ರೇಡಿಯೋ ವರದಿಯೊಂದು ತಿಳಿಸಿದೆ.
ಜೋಹಾನ್ಸ್ಬರ್ಗ್ನಿಂದ ಹೊರಟ ವಿಮಾನದ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಅಲ್ಲದೇ ಈ ಪ್ರದೇಶ ಸಮುದ್ರ ಮಟ್ಟದಿಂದ 1600ಮೀಟರ್ಗಳಷ್ಟು ಎತ್ತರದಲ್ಲಿದ್ದು, ದಕ್ಷಿಣ ಹೇಮಿಸ್ಪಿಯರ್ ಪ್ರದೇಶದಲ್ಲಿ ಬೇಸಿಗೆ ಋತುವಿನ ಹವಾಮಾನ ಯಾವಾಗಲೂ ಪ್ರತಿಕೂಲವಾಗಿರುವುದು ಸಾಮಾನ್ಯವಾಗಿದೆ.
|