ರಿಪಬ್ಲಿಕನ್ ಪಕ್ಷದ ಜಾನ್ ಮೆಕೈನ್ ಅವರು ಅಮೆರಿಕದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿದ್ದಾರೆ ಎಂಬ ಭರವಸೆ ಇರುವುದಾಗಿ ಅಲ್ ಕೈದಾ ಉಗ್ರಗಾಮಿ ಸಂಘಟನೆಯ ಬೆಂಬಲಿಗರು ಅಲ್ ಹೆಸ್ಬಾ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
ಮೆಕೈನ್ ಅಧ್ಯಕ್ಷರಾಗುವ ಮೂಲಕ ಇರಾಕ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಕದನವನ್ನು ಮುಂದುವರಿಸುವುದಾಗಿ ಅಲ್ ಕೈದಾ ಬೆಂಬಲಿಗರು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಮೆಕೈನ್ ಅಮೆರಿಕದ ಅಧ್ಯಕ್ಷರಾಗಬೇಕೆಂದು ಅಲ್ ಹೆಸ್ಬಾ ವೆಬ್‌ಸೈಟ್‌ಗೆ ಕಳುಹಿಸಿದ ಸಂದೇಶವೊಂದರಲ್ಲಿ ತಿಳಿಸಿದೆ. ಅಲ್ಲದೇ ಕದನವನ್ನು ಮುಂದುವರಿಸುವ ಅಮೆರಿಕದ ಕೊನೆಯ ಸೈನಿಕರಾಗುವ ಹೊಣೆ ಹೊರಬೇಕಾಗಿದೆ ಎಂದು ಅಲ್ ಕೈದಾ ಬೆಂಬಲಿಗರು ಆಶಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಪಟ್ಟಕ್ಕೆ ಅವರೇ ಸೂಕ್ತವಾದ ವ್ಯಕ್ತಿಯಾಗಿದ್ದಾರೆ, ದೇಶದ ಆರ್ಥಿಕ ಮತ್ತು ಮಿಲಿಟರಿ ಸುಸ್ಥಿತಿಯ ನಿರ್ವಹಣೆಯ ನಿಟ್ಟಿನಲ್ಲಿ ಅಧ್ಯಕ್ಷ ಚುನಾವಣೆಯಲ್ಲಿ ಅಲ್ ಕೈದಾ ಮೆಕೈನ್ ಅವರನ್ನು ಬೆಂಬಲಿಸಲಿದೆ ಎಂದು ಹೇಳಿದೆ.
ಅಲ್ ಹೆಸ್ಬಾಗೆ ಬಂದ ಸಂದೇಶವನ್ನು ಮೇರಿಲ್ಯಾಂಡ್‌ನ ಬೆಥೆಸ್ಸಾಡಾ ಮೂಲದ ಎಸ್‌ಐಟಿಇ ಗುಪ್ತಚರ ಇಲಾಖೆ ತರ್ಜುಮೆ ಮಾಡಿದೆ. |