ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್:ವೈಮಾನಿಕ ದಾಳಿಗೆ 13 ಉಗ್ರರು ಹತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್:ವೈಮಾನಿಕ ದಾಳಿಗೆ 13 ಉಗ್ರರು ಹತ
ಇಲ್ಲಿನ ಬಾಜೌರ್ ಬುಡಕಟ್ಟು ಪ್ರದೇಶದಲ್ಲಿನ ಉಗ್ರರ ಅಡಗುತಾಣಗಳ ಮೇಲೆ ಪಾಕ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 13ಮಂದಿ ಉಗ್ರರು ಹತರಾಗಿದ್ದು, 18ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ದಾರ್ರಾ ಆದಂ ಖೇಲ್ ಪ್ರಾಂತ್ಯದಲ್ಲಿ ರಕ್ಷಣಾ ಪಡೆ 17ತಾಲಿಬಾನ್ ಹೋರಾಟಗಾರರನ್ನು ಸೆರೆ ಹಿಡಿದಿರುವುದಾಗಿ ತಿಳಿಸಿದೆ.

ಚಾರ್‌ಮಾಂಗ್,ತಾಂಗಿ,ಮಾಶ್ಕೋರೊ ಮತ್ತು ಚೈನಾರ್ ಪ್ರದೇಶದಲ್ಲಿನ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಪರಿಣಾಮ 13ಮಂದಿ ಉಗ್ರರು ಸಾವನ್ನಪ್ಪಿರುವುದಾಗಿ ಟಿವಿ ಚಾನೆಲ್‌ವೊಂದರ ವರದಿ ಹೇಳಿದೆ.

ತಾಲಿಬಾನ್ ಪ್ರಾಬಲ್ಯದ ರಾಶ್‌ಕೈ ಮತ್ತು ಲೊಯ್‌ಸಾಮ್ ಪ್ರದೇಶದ ಉಗ್ರರ ಅಡಗುತಾಣಗಳ ಮೇಲೂ ಬಾಂಬ್ ದಾಳಿ ನಡೆಸಲಾಗಿದ್ದು, ಅದರಲ್ಲಿನ ಸಾವು-ನೋವಿನ ಕುರಿತು ಯಾವುದೇ ವರದಿಯಾಗಿಲ್ಲ.

ದಾರ್ರಾ ಆದಂ ಖೇಲ್ ಪ್ರದೇಶದ ವಾಯುವ್ಯ ಫ್ರಾಂಟಿಯರ್ ಪ್ರಾಂತ್ಯದಲ್ಲಿ ರಕ್ಷಣಾ ಪಡೆ 3ಕಮಾಂಡರ್ ಸೇರಿದಂತೆ ಸುಮಾರು 17ಉಗ್ರರನ್ನು ಸೆರೆ ಹಿಡಿದಿದ್ದು, ತೀವ್ರ ಶೋಧ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ 400 ಮ್ಯಾಗಜಿನ್ ಗನ್ಸ್, 360ಮಿಸೈಲ್ಸ್, 15ಸ್ವಯಂ ಚಾಲಿತ ಗನ್, ಮೂರು ವಯರ್‌ಲೆಸ್ ಸೆಟ್, ಗಣಿ ಸ್ಫೋಟಕ ಹಾಗೂ ರೈಫಲ್‌ಗಳು ಸೇರಿವೆ.

ಕಳೆದ ಕೆಲವು ವಾರಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ದಾರ್ರಾ ಆದಂ ಖೇಲ್ ಪ್ರದೇಶದಲ್ಲಿ ಈವರೆಗೆ ಸುಮಾರು 200 ಉಗ್ರರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೆಕೈನ್ ಬೆಂಬಲಕ್ಕೆ ಅಲ್ ಕೈದಾ !
ಜೋಹಾನ್ಸ್‌ಬರ್ಗ್: ವಿಮಾನ ಅಪಘಾತಕ್ಕೆ 6 ಬಲಿ
ಟೆಕ್ಸಾಸ್: ಕೊಲೆ ಆರೋಪಿಗೆ ಮರಣದಂಡನೆ
ಅಧ್ಯಕ್ಷಗಾದಿ: ಒಬಾಮ ಮುನ್ನಡೆ-ಸಮೀಕ್ಷೆ
ಶ್ರೀಲಂಕಾ: ಎಲ್‌ಟಿಟಿಇಯಿಂದ ಮತ್ತೆ ದಾಳಿ
ಅಪಹೃತ ಭಾರತೀಯ ಹಡಗು ಸಿಬ್ಬಂದಿಗಳ ರಕ್ಷಣೆ