ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ರೀಲಂಕಾ:ಕಿಲ್ಲಿನೋಚಿ ಗ್ರಾಮ ಸೇನಾ ವಶಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ:ಕಿಲ್ಲಿನೋಚಿ ಗ್ರಾಮ ಸೇನಾ ವಶಕ್ಕೆ
ಎಲ್‌ಟಿಟಿಇ ಪ್ರಾಬಲ್ಯದ ಕಿಲ್ಲಿನೋಚಿಯನ್ನು ಹತೋಟಿಗೆ ತೆಗೆದುಕೊಳ್ಳುವ ಯತ್ನದಲ್ಲಿ ಮುನ್ನಡೆ ಸಾಧಿಸಿರುವ ಶ್ರೀಲಂಕಾ ಪಡೆಗಳು ರಾಷ್ಟ್ರದ ಯುದ್ಧಪೀಡಿತ ಉತ್ತರ ಮುಂಚೂಣಿ ಪ್ರದೇಶದ ಆಯಕಟ್ಟಿನ ಗ್ರಾಮವನ್ನು ವಶಪಡಿಸಿಕೊಂಡಿವೆ.

58 ಡಿವಿಷನ್ ಪಡೆಯು ತಮಿಳು ಉಗ್ರಗಾಮಿಗಳ ಜತೆ ಭಾರೀ ಕದನದ ಬಳಿಕ, ಉತ್ತರವೆನ್ನರಿಕುಲಂನಲ್ಲಿರುವ ಅನಾವೆಲ್ಲುಟನ್ ಗ್ರಾಮವನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಸೇನೆ ತಿಳಿಸಿದೆ.

ತಮಿಳು ಬಂಡುಕೋರರ ಜತೆ 2002 ಕದನವಿರಾಮ ಒಪ್ಪಂದದಿಂದ ಸರ್ಕಾರ ಹಿಂತೆಗೆದ ಬಳಿಕ ಕಳೆದ ಎರಡು ವರ್ಷಗಳಿಂದ ಉಲ್ಬಣಿಸಿದ್ದ ಹೋರಾಟವು ಮತ್ತಷ್ಟು ತೀವ್ರವಾಗಿದೆ.

ಉತ್ತರ ಮುಂಚೂಣಿ ಪ್ರದೇಶಗಳಲ್ಲಿ ಸರ್ಕಾರದ ಪಡೆಗಳು ಗಣನೀಯ ಪ್ರಗತಿ ಸಾಧಿಸಿದ್ದು, ಬಂಡುಕೋರರ ವಶದಲ್ಲಿದ್ದ ಪ್ರದೇಶವನ್ನು ಮತ್ತು ಅನೇಕ ನೆಲೆಗಳನ್ನು ವಶಪಡಿಸಿಕೊಂಡಿವೆ. ಏತನ್ಮಧ್ಯೆ, ಅಕ್ಕರಾಯನಕುಲಂನಲ್ಲಿರುವ ಎರಡು ಎಲ್‌ಟಿಟಿಇ ಬಂಕರ್‌ಗಳನ್ನು ಅದೇ ವಿಭಾಗದ ಪಡೆಗಳು ನಾಶಮಾಡಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್:ವೈಮಾನಿಕ ದಾಳಿಗೆ 13 ಉಗ್ರರು ಹತ
ಮೆಕೈನ್ ಬೆಂಬಲಕ್ಕೆ ಅಲ್ ಕೈದಾ !
ಜೋಹಾನ್ಸ್‌ಬರ್ಗ್: ವಿಮಾನ ಅಪಘಾತಕ್ಕೆ 6 ಬಲಿ
ಟೆಕ್ಸಾಸ್: ಕೊಲೆ ಆರೋಪಿಗೆ ಮರಣದಂಡನೆ
ಅಧ್ಯಕ್ಷಗಾದಿ: ಒಬಾಮ ಮುನ್ನಡೆ-ಸಮೀಕ್ಷೆ
ಶ್ರೀಲಂಕಾ: ಎಲ್‌ಟಿಟಿಇಯಿಂದ ಮತ್ತೆ ದಾಳಿ