2ಮಿಲಿಯನ್ ಡಾಲರ್ ಲಾಟರಿ ಗೆದ್ದ ಜಪಾನ್ ಮಹಿಳೆಯೊಬ್ಬರಿಗೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಲಾಟರಿ ಏನೋ ಮಹಿಳೆ ಗೆದ್ದಿದ್ದಳು, ಆದರೆ ಜೀವ ಗೆಲ್ಲಲಾಗಲಿಲ್ಲ. ಆಕೆಯನ್ನು ವ್ಯಕ್ತಿಯೊಬ್ಬ ಬುಧವಾರ ಕೊಲೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯೋಷಿದಾ (41ವ) ಎಂಬಾಕೆ 200ಮಿಲಿಯನ್ ಯೆನ್ (2.05ಮಿ.ಡಾಲರ್)ಲಾಟರಿ ಗೆದ್ದಿದ್ದಳು. ಆ ಸಂತೋಷದಲ್ಲಿ ಲಾಟರಿ ಹಣ ಪಡೆಯುವ ಸಂಭ್ರಮದಲ್ಲಿದ್ದಳು. ಆದರೆ ತಾನೊಂದು ಬಗೆದೊಡೆ ವಿಧಿ ಮತ್ತೊಂದು ಬಗೆಯಿತು ಎಂಬಂತೆ. ಆಕೆ ಲಾಟರಿ ಗೆದ್ದ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದನ್ನ ಅರಿತ ಪತ್ರಿಕಾ ವಿತರಕ ಜಿನಿಚಿ ಕುಮಾಗೈ(51ವ) ಎಂಬಾತ ಲಾಟರಿ ಹಣಕ್ಕೆ ಆಸೆಪಟ್ಟು ಕೊಲೆಗೈದಿದ್ದ.
ಆದರೆ ಕೆಲವು ಮಾಧ್ಯಮಗಳ ವರದಿ ಪ್ರಕಾರ ಕುಮಾಗೈ ಮತ್ತು ಯೋಷಿದಾ ನಡುವೆ ಪ್ರೇಮ ವ್ಯವಹಾರ ಇತ್ತು ಎಂದು ಆರೋಪಿಸಿವೆ.ಯೋಷಿದಾ ಹತ್ಯೆಯ ನಂತರ ಕೂಡಲೇ ಜಾಗೃತರಾದ ಪೊಲೀಸರು, ಕುಮಾಗೈ ಮನೆಯನ್ನು ಶೋಧಿಸಿದಾಗ ಆಕೆಯ ಬ್ಯಾಂಕ್ ಪಾಸ್ ಪುಸ್ತಕ ದೊರೆತಿತ್ತು.
ಬಳಿಕ ಆತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ, ಆಕೆಯನ್ನು ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|