ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿದ್ಯುತ್ ಬಿಲ್ ಪಾವತಿಸಲು ಮಾಜಿ ದೊರೆಗೆ ಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯುತ್ ಬಿಲ್ ಪಾವತಿಸಲು ಮಾಜಿ ದೊರೆಗೆ ಸೂಚನೆ
ತನ್ನ ರಾಜಪಟ್ಟವನ್ನು ಕಳೆದುಕೊಂಡ ತಿಂಗಳುಗಳ ನಂತರ, ನೇಪಾಳ ಮಾವೋವಾದಿ ನೇತೃತ್ವದ ಸರಕಾರಕ್ಕೆ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ, ಮಾಜಿ ದೊರೆ ಜ್ಞಾನೇಂದ್ರ ಕುಟುಂಬ ವಿದ್ಯುತ್ ಸಂಪರ್ಕವು ಕಡಿತಗೊಳ್ಳುವ ಸಾಧ್ಯತೆ ಇದೆ.

ಸುಮಾರು 7.7. ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುವಂತೆ ನೇಪಾಳ ಸರಕಾರವು ಮಾಜಿ ದೊರೆ ಜ್ಞಾನೇಂದ್ರ ಅವರಿಗೆ 15 ದಿನಗಳ ನೋಟಿಸ್ ನೀಡಿದೆ ಎಂದು ದೇಶದ ವಿದ್ಯುತ್ ಕಂಪನಿಯು ತಿಳಿಸಿದೆ.

ಮುಂದಿನ 15 ದಿನಗಳೊಳಗೆ ಬಾಕಿ ಉಳಿದಿರುವ ವಿದ್ಯುತ್ ಬಿಲ್‌ನ್ನು ಪಾವತಿಸಲು ಮಾಜಿ ದೊರೆ ಜ್ಞಾನೇಂದ್ರ ಮತ್ತು ಅವರ ಸಂಬಂಧಿಕರು ವಿಫಲವಾದಲ್ಲಿ, ಅರಮನೆಯಲ್ಲಿನ ಮತ್ತು ಮಾಜಿ ದೊರೆ ಜ್ಞಾನೇಂದ್ರ ಮತ್ತು ಅವರ ಸಂಬಂಧಿಕರ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ರಾಜ್ಯ ನಿಯಂತ್ರಿತ ನೇಪಾಳ ವಿದ್ಯುತ್ ಪ್ರಾಧಿಕಾರವು(ಎನ್ಇಎ) ನಿರ್ಧರಿಸಿದೆ.

ಎನ್ಇಎ ಕಾರ್ಯನಿರ್ವಾಹಕ ನಿರ್ದೇಶಕ ಅರ್ಜುನ್ ಕುಮಾರ್ ಕಾರ್ಕಿ ಅಕ್ಟೋಬರ್ 15ರಂದು ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಆನ್‌ಲೈನ್ ಪತ್ರಿಕೆಗಳು ತಿಳಿಸಿವೆ.

ಬಾಕಿ ಇರುವ ವಿದ್ಯುತ್ ಬಿಲ್‌ನ್ನು ಪಾವತಿಸುವಂತೆ ಕಳೆದ ವರ್ಷವೇ ಎನ್ಇಎ ಜ್ಞಾನೇಂದ್ರ ಕುಟುಂಬಕ್ಕೆ ಸೂಚಿಸಿತ್ತು. ಆದರೆ, ಜ್ಞಾನೇಂದ್ರ ಕುಟುಂಬವು ಇದರ ಬಗ್ಗೆ ಅಷ್ಟೊಂದು ಲಕ್ಷ್ಯ ವಹಿಸಿರಲಿಲ್ಲ.

2006ರಲ್ಲಿ ನೇಪಾಳದಲ್ಲಿ ಪ್ರಜಾಪ್ರಭುತ್ವ ಪುನರ್‌ಸ್ಥಾಪನೆಗೊಂಡ ನಂತರ, ರಾಜ್ಯ ವಿದ್ಯುತ್ ನಿಗಮವು ವಿದ್ಯುತ್ ಬಿಲ್ ಪಾವತಿಸುವಂತೆ ಮಾಜಿ ದೊರೆ ಜ್ಞಾನೇಂದ್ರ ಅವರಿಗೆ ಮತ್ತೆ ಕರೆ ನೀಡಿತ್ತು. ಆದರೆ, ಈ ಸೂಚನೆಯನ್ನೂ ಕಡೆಗಣಿಸಿದ ಜ್ಞಾನೇಂದ್ರ ಕುಟುಂಬದ ನಿರ್ಲ್ಯಕ್ಷ ವರ್ತನೆಯಿಂದ ಬೇಸರಗೊಂಡಿರುವ ಎನ್ಇಎ ಈ ನಿರ್ಧಾರವನ್ನು ಕಾರ್ಯರೂಪಗೊಳಿಸುವಂತೆ ತನ್ನ ವಿತರಕರಿಗೆ ಸೂಚನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಪಾನ್: ಲಾಟರಿ ಗೆದ್ದರೂ,ಜೀವ ಉಳಿಯಲಿಲ್ಲ !
ಶ್ರೀಲಂಕಾ:ಕಿಲ್ಲಿನೋಚಿ ಗ್ರಾಮ ಸೇನಾ ವಶಕ್ಕೆ
ಪಾಕ್:ವೈಮಾನಿಕ ದಾಳಿಗೆ 13 ಉಗ್ರರು ಹತ
ಮೆಕೈನ್ ಬೆಂಬಲಕ್ಕೆ ಅಲ್ ಕೈದಾ !
ಜೋಹಾನ್ಸ್‌ಬರ್ಗ್: ವಿಮಾನ ಅಪಘಾತಕ್ಕೆ 6 ಬಲಿ
ಟೆಕ್ಸಾಸ್: ಕೊಲೆ ಆರೋಪಿಗೆ ಮರಣದಂಡನೆ