ಕಳೆದ ಒಂದು ವಾರದಿಂದ ಹವಾಮಾನ ವೈಪರೀತ್ಯದಿಂದ ಮಧ್ಯ ಅಮೆರಿಕದಲ್ಲಿ ಬಲವಾಗಿ ಬೀಸುತ್ತಿರುವ ಗಾಳಿ ಮಳೆಯಿಂದಾಗಿ ಸುಮಾರು 39ಮಂದಿ ಸಾವನ್ನಪ್ಪಿದ್ದು, ಆರು ಜನರು ನಾಪತ್ತೆಯಾಗಿದ್ದಾರೆ. ಒಟ್ಟು 2,50,000ಮಂದಿ ನಿರ್ವಸಿತರಾಗಿದ್ದಾರೆ.
ಪ್ರವಾಹದಿಂದಾಗಿ ಕೋಸ್ಟರಿಕಾ, ನಿಕಾರ್‌ಗುವಾ,ಹೊಂಡುರಾಸ್ ಗ್ವಾಟೆಮಾಲಾ ಮತ್ತು ಎಲ್ ಸಲ್ವಾಡಾರ್ ಪ್ರದೇಶಗಳಲ್ಲಿನ ರಸ್ತೆಗಳು ಸೇರಿದಂತೆ ಸುಮಾರು ಹತ್ತು ಸಾವಿರ ಮನೆಗಳು ಧ್ವಂಸಗೊಂಡಿದೆ.
ಬಿರುಗಾಳಿ ಮಳೆಯ ಪ್ರವಾಹದಿಂದಾಗಿ ಸುಮಾರು ಒಂದು ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿರುವುದಾಗಿ ಅಧಿಕಾರಿಗಳ ವರದಿ ತಿಳಿಸಿದೆ. 1998ರಲ್ಲಿ ಸಂಭವಿಸಿದ ಹರಿಕೇನ್ ಪ್ರಬಲ ಚಂಡಮಾರುತ ದಾಳಿಗೆ 20ಸಾವಿರ ಮಂದಿ ಸಾವಿಗೀಡಾಗಿದ್ದರು.
ನೂತನ ವರದಿಯಂತೆ, ಗಾಳಿ-ಮಳೆಗೆ ಹೊಂಡುರಾಸ್‌ನಲ್ಲಿ 20ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಕಣ್ಮರೆಯಾಗಿದ್ದಾರೆ. ಇದರಲ್ಲಿ ಗ್ವಾಟೆಮಾಲಾದಲ್ಲಿ 4, ಕೋಸ್ಟರಿಕಾದ 7, ನಿಕಾರ್ಗುವಾದ 4 ಹಾಗೂ ನಾಲ್ಕಕ್ಕೂ ಅಧಿಕ ಮಂದಿ ಎಲ್ ಸಲ್ವಡಾರ್ ಜನರು ಸಾವನ್ನಪ್ಪಿದ್ದಾರೆ. |