ಇರಾಕ್ ಸಚಿವರನ್ನು ಗುರಿಯಾಗಿರಿಸಿ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ 13ಮಂದಿ ಬಲಿಯಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಕಳೆದ ಕೆಲವು ವರ್ಷಗಳಿಂದ ಇರಾಕ್‌ನಲ್ಲಿ ಉಗ್ರರು ತಮ್ಮ ಕಾರ್ಯಸಾಧನೆಗಾಗಿ ದಾಳಿಯನ್ನು ಮುಂದುವರಿಸುತ್ತಲೇ ಬಂದಿದ್ದಾರೆ, ಆದರೆ ರಕ್ಷಣಾ ಪಡೆಯ ಎದಿರೇಟಿನಿಂದಾಗಿ ತಮ್ಮ ಗುರಿಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದೀಗ ಉಗ್ರರು ಇರಾಕ್ ಸರ್ಕಾರದ ಅಧಿಕಾರಿ,ಸಚಿವರನ್ನು ಗುರಿಯಾಗಿಟ್ಟು ದಾಳಿ ನಡೆಸುತ್ತಿದೆ.
ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವರು ಹಾಗೂ ಬೆಂಗಾವಲು ಪಡೆ ವಾಹನದಲ್ಲಿ ಸೆಂಟ್ರಲ್ ಬಾಬ್ ಅಲ್ ಶಾರ್ಜಿ ಪ್ರದೇಶದ ಸಮೀಪ ಈ ಆತ್ಮಾಹುತಿ ಬಾಂಬ್ ದಾಳಿ ನಡೆಸಿರುವುದಾಗಿ ಸಚಿವಾಲಯದ ವಕ್ತರಾ ತಿಳಿಸಿದ್ದಾರೆ.
ಈ ದಾಳಿಯಲ್ಲಿ ಸಚಿವ ಮೊಹಮೂದ್ ಮೊಹಮ್ಮದ್ ಅಲ್ ರಾಧಿ ಅವರು ಪ್ರಾಣಾಪಯಾದಿಂದ ಪಾರಾಗಿದ್ದು, ಅವರು ಮೂವರು ಅಂಗರಕ್ಷರು ಸಾವನ್ನಪ್ಪಿರುವುದಾಗಿ ವಕ್ತಾರ ಅಬ್ದುಲ್ಲಾ ಅಲ್ ಲಾಮಿ ಅಲ್ ಅರೇಬಿಯಾ ಟಿವಿಗೆ ನೀಡಿದ ಮಾಹಿತಿಯಲ್ಲಿ ವಿವರಿಸಿದ್ದಾರೆ.
|