ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತಕ್ಕೆ ಪ್ರಥಮ ಆದ್ಯತೆ: ಒಬಾಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಪ್ರಥಮ ಆದ್ಯತೆ: ಒಬಾಮಾ
PTI
ಏಶಿಯಾದಲ್ಲಿನ ಭಯೋತ್ಪಾದನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಅಮೆರಿಕವು ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸಲಿದೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಕ್ರಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ತಿಳಿಸಿದ್ದಾರೆ..

ತನ್ನ ಆಡಳಿತಾವಧಿಯಲ್ಲಿ ಭಾರತಕ್ಕೆ ಪ್ರಥಮ ಆದ್ಯತೆ ದೊರೆಯಲಿದೆ ಎಂದ ಸಂದರ್ಶನವೊಂದರಲ್ಲಿ ಒಬಾಮಾ ತಿಳಿಸಿದ್ದು, ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಹಲವು ವಿಷಯಗಳ ಬಗ್ಗೆ ಭಾರತದೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

21ನೇ ಶತಮಾನದಲ್ಲಿ ಭಾರತವು ಅಮೆರಿಕದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದ್ದು, ಆದ್ದರಿಂದ ಭಯೋತ್ಪಾದನೆ ನಿರ್ಮೂಲನ, ಶಾಂತಿ ಸ್ಥಾಪನೆ ಸೇರಿದಂತೆ ಅನೇಕ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು ಭಾರತ ಮತ್ತು ಅಮೆರಿಕವು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಒಬಾಮಾ ಅಭಿಪ್ರಾಯಪಟ್ಟಿದ್ದಾರೆ.

ವಲಸೆ ಸುಧಾರಣೆ, ಶಿಕ್ಷಣ, ವಿದೇಶಾಂಗ ನೀತಿ, ನಾಗರಿಕ ಹಕ್ಕು, ಜಾಗತೀಕರಣ, ವ್ಯಾಪಾರ , ಭಾರತ ಅಮೆರಿಕ ನಡುವಣ ಸಕ್ರಿಯ ಪಾಲುದಾರಿಗೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಭಾರತದ ಜೊತೆಗೆ ಅಮೆರಿಕವು ಬಲವಾದ ಸಂಬಂಧವನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಗ್ದಾದ್:ಆತ್ಮಾಹುತಿ ದಾಳಿ-ಸಚಿವ ಪಾರು
ಚಂಡಮಾರುತ:2ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರು
ಶೇ.75ರಷ್ಟು ಚೀನೀಯರ ಬೆಂಬಲ ಪಡೆದ ಒಬಾಮಾ
ಪಾಕ್ ಕಾರ್ಯಾಚರಣೆ:23 ಉಗ್ರರು ಹತ
ವಿದ್ಯುತ್ ಬಿಲ್ ಪಾವತಿಸಲು ಮಾಜಿ ದೊರೆಗೆ ಸೂಚನೆ
ಜಪಾನ್: ಲಾಟರಿ ಗೆದ್ದರೂ,ಜೀವ ಉಳಿಯಲಿಲ್ಲ !