ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮಾರಿಯಟ್ ಬ್ಲಾಸ್ಟ್: 4 ಮಂದಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರಿಯಟ್ ಬ್ಲಾಸ್ಟ್: 4 ಮಂದಿ ಬಂಧನ
ಕಳೆದ ತಿಂಗಳು ಮಾರಿಯೊಟ್ ಹೋಟೆಲ್‌ನ ಮುಂಭಾಗದಲ್ಲಿ ನಡೆದ ಆತ್ಮಾಹುತಿ ಟ್ರಕ್ ಬಾಂಬ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಭಯೋತ್ಪಾದನಾ ವಿರೋಧಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 20 ರಂದು ಆತ್ಮಾಹುತಿ ದಳದ ಸದಸ್ಯನೊಬ್ಬ ಸ್ಫೋಟಕಗಳನ್ನು ತುಂಬಿದ ಟ್ರಕ್‌‌ ಅನ್ನು ಮಾರಿಯೊಟ್ ಹೋಟೆಲ್ ಒಳಕ್ಕೆ ನುಗ್ಗಿಸಿದ ಸ್ಫೋಟಿಸಿದ ಪರಿಣಾಮ 55 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದರು.

ನ್ಯಾಯಾಲಯ ಏಳು ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ನೀಡಿದ್ದು ,ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಲ್ತಾಫ್ ಅಲಿ ಕಾಟ್ಟಕ್ ತಿಳಿಸಿದ್ದಾರೆ.

ಬಂಧಿತ ನಾಲ್ಕು ಮಂದಿಯಲ್ಲಿ ಒಬ್ಬ ವೃತ್ತಿಯಿಂದ ವೈದ್ಯನಾಗಿದ್ದು,ಮತ್ತೊಬ್ಬ ವಕೀಲರಾಗಿದ್ದಾರೆ. ಭಯೋತ್ಪಾದನೆ ಚಟುವಟಿಕೆ ಸೇರಿದಂತೆ ಅನೇಕ ಪ್ರಕರಣಗಳನ್ನು ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ ಎಂದು ಖಾಟ್ಟಕ್ ತಿಳಿಸಿದ್ದಾರೆ.

ಶಂಕಿತ ಉಗ್ರರನ್ನು ಇಸ್ಲಾಮಾಬಾದ್‌ಗೆ ಹತ್ತಿರವಿರುವ ರಾವಲ್‌ಪಿಂಡಿಯ ನ್ಯಾಯಾಲಯಕ್ಕೆ ಬಿಗಿ ಭಧ್ರತೆಯ ಮಧ್ಯೆ ಕರೆತರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೈಮಾನಿಕ ದಾಳಿಯಲ್ಲಿ 25 ಕುರ್ದಿಶ್ ಉಗ್ರರ ಸಾವು
ಜೋರ್ಡಾನ್- ದಕ್ಷಿಣ ಕೊರಿಯಾ ಅಣುಬಂಧಕ್ಕೆ ಸಹಿ
ಭಾರತಕ್ಕೆ ಪ್ರಥಮ ಆದ್ಯತೆ: ಒಬಾಮಾ
ಬಾಗ್ದಾದ್:ಆತ್ಮಾಹುತಿ ದಾಳಿ-ಸಚಿವ ಪಾರು
ಚಂಡಮಾರುತ:2ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರು
ಶೇ.75ರಷ್ಟು ಚೀನೀಯರ ಬೆಂಬಲ ಪಡೆದ ಒಬಾಮಾ