ಅಧಿಕಾರ ಹಂಚಿಕೆ ಒಪ್ಪಂದ ಕುರಿತಂತೆ ಸ್ಥಗಿತಗೊಳಿಸಲಾದ ಮಾತುಕತೆಯನ್ನು ಮುಂದುವರಿಸಲು ವಿರೋಧ ಪಕ್ಷದ ನಾಯಕ ಮೊರ್ಗಾನ್ ತ್ಸವಾಂಗಿರೈ ರಾಷ್ಟ್ರಾಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯುವ ಸಭೆಗೆ ಪಾಲ್ಗೊಳ್ಳಲಿದ್ದಾರೆ ಎಂದು ಮೂವ್‌ಮೆಂಟ್ ಡೆಮಾಕ್ರೆಟಿಕ್ ಚೇಂಜ್ ಪಕ್ಷದ ಮೂಲಗಳು ತಿಳಿಸಿವೆ.
ಮುಗಾಬೆ ಸರಕಾರಕ್ಕೆ ಸಂಪುಟದ ಮೇಲೆ ನಿಯಂತ್ರಣ ಹೊಂದಲು ಮತ್ತೊಮ್ಮೆ ಚುನಾವಣೆ ಅಗತ್ಯವಾಗಿದ್ದರಿಂದ ಮಾತುಕತೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಒಡ್ಡಿದ್ದರು.
ಸೋಮವಾರದಂದು ನಡೆಯುವ ಮಾತುಕತೆ ಸರಕಾರದಲ್ಲಿ ಸಮರ್ಪಕವಾಗಿ ಅಧಿಕಾರ ಹಂಚಿಕೆ ಕುರಿತಂತೆ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿರುವುದರಿಂದ ಸಭೆಗೆ ತೆರಳುತ್ತಿದ್ದೇವೆ ಎಂದು ಎಂಡಿಸಿ ವಕ್ತಾರ ನೆಲ್ಸನ್ ಛಾಮಸಿಯಾ ತಿಳಿಸಿದ್ದಾರೆ.
ರಾಷ್ಟ್ರಾಧ್ಯಕ್ಷ ಮುಗಾಬೆ ಮಹತ್ವದ ಖಾತೆಗಳನ್ನು ಹೊಂದಿರುವ ಸಚಿವರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು ವಿರೋಧ ಪಕ್ಷವನ್ನು ದುರ್ಬಲಗೊಳಿಸುವ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಮೂವ್‌ಮೆಂಟ್ ಡೆಮಾಕ್ರೆಟಿಕ್ ಚೇಂಜ್ ಆರೋಪಿಸಿದೆ |