ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬೀಜಿಂಗ್:ಸಿಂಗ್- ಗಿಲಾನಿ ಮಾತುಕತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೀಜಿಂಗ್:ಸಿಂಗ್- ಗಿಲಾನಿ ಮಾತುಕತೆ
PTI
ಪಾಕಿಸ್ತಾನ ಪ್ರಧಾನಮಂತ್ರಿ ಯೂಸುಫ್ ರಾಜಾ ಗಿಲಾನಿ ಅವರೊಂದಿಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶುಕ್ರವಾರ ಭಯೋತ್ಪಾದನೆಯ ಕುರಿತಾಗಿ ಮಾತುಕತೆ ನಡೆಸಿದ್ದು, ಭಯೋತ್ಪಾದನೆಯ ವಿರುದ್ಧ ಹೋರಾಡುವ ಸಲುವಾಗಿ ಭಾರತದೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸಲು ಪಾಕಿಸ್ತಾನವು ಬದ್ಧವಾಗಿದೆ ಎಂದು ಗಿಲಾನಿ ಮಾತುಕತೆಯ ವೇಳೆ ಸಿಂಗ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.

ಚೀನಾ ರಾಜಧಾನಿಯಲ್ಲಿ ನಡೆಯುತ್ತಿರುವ ಏಶಿಯಾ ಯುರೋಪ್ ಶೃಂಗಸಭೆಯ ವೇಳೆ ಸಿಂಗ್ ಗಿಲಾನಿ ಅವರನ್ನು ಭೇಟಿಯಾಗಿದ್ದು, ದ್ವಿಪಕ್ಷೀಯ ಸಂಬಂಧಗಳ ಕುರಿತಾಗಿ ಈ ವೇಳೆ ಉಭಯ ನಾಯಕರು ವಿಮರ್ಷೆ ನಡೆಸಿದರು.

ಪಾಕಿಸ್ತಾನ ಪ್ರಧಾನಮಂತ್ರಿ ಅವರೊಂದಿಗೆ ಉತ್ತಮ ರೀತಿಯ ಮಾತುಕತೆಯನ್ನು ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದ ಎರಡು ಮಾರ್ಗಗಳಲ್ಲಿನ ವ್ಯಾಪಾರ ಪ್ರಾರಂಭದ ಕುರಿತಾಗಿ ಎರಡೂ ದೇಶಗಳು ಸಂತಸ ಹೊಂದಿವೆ ಎಂದು ಗಿಲಾನಿ ಅವರೊಂದಿಗಿನ 20 ನಿಮಿಷಗಳ ಮಾತುಕತೆಯ ನಂತರ ಸಿಂಗ್ ಹೇಳಿದರು.

ಶ್ರೀನಗರ-ಮುಜಾಫರಾಬಾದ್ ಮತ್ತು ಪೂಂಚ್-ರಾವಲ್ಕೋಟ್ ರಸ್ತೆಗಳಲ್ಲಿ ಟ್ರಕ್ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಅಕ್ಟೋಬರ್ 21ರಂದು ಭಾರತ ಮತ್ತು ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ವ್ಯಾಪಾರವನ್ನು ಪುನರಾರಂಭಿಸಿತ್ತು. ಸುಮಾರು 60 ವರ್ಷಗಳ ನಂತರ ಪ್ರಾರಂಭಗೊಂಡ ಈ ಗಡಿ ವ್ಯಾಪಾರವು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವನ್ನೇ ಬರೆದಿತ್ತು.

ಮೂರು ದಿನಗಳ ಜಪಾನ್ ಭೇಟಿಯ ನಂತರ, ಎಸ್ಇಎಂ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಸಿಂಗ್ ಗುರುವಾರ ಬೀಜಿಂಗ್‌ಗೆ ತೆರಳಲಿದ್ದು, ಜಂಟಿ ಭಯೋತ್ಪಾದನಾ ವಿರೋಧ ತಂತ್ರದ ಯಶಸ್ಸಿನಲ್ಲಿನ ದೇಶದ ಬದ್ಧತೆಯ ಬಗ್ಗೆ ಗಿಲಾನಿ ತಿಳಿಸಿರುವುದಾಗಿ ಸಿಂಗ್ ತಿಳಿಸಿದರು.

'ಭಯೋತ್ಪಾದನೆಯನ್ನು ನಿಯಂತ್ರಿಸುವ ಸಲುವಾಗಿ ಭಾರತದೊಂದಿಗೆ ಗಂಭೀರವಾಗಿ ಕಾರ್ಯನಿರ್ವಹಿಸಲು ಪಾಕಿಸ್ತಾನವು ಬದ್ಧವಾಗಿದೆ ಎಂದು ಗಿಲಾನಿ ಮಾತುಕತೆಯ ವೇಳೆ ನನಗೆ ಭರವಸೆ ನೀಡಿದ್ದಾರೆ. ಭಯೋತ್ಪಾದನೆಯು ಭಾರತ ಮತ್ತು ಪಾಕಿಸ್ತಾನದ ಸಾಮಾನ್ಯ ಶತ್ರುವಾಗಿದೆ' ಎಂದು ಸಿಂಗ್ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಎಸ್ಐ ವರಿಷ್ಠ ಅಮೆರಿಕಕ್ಕೆ ಭೇಟಿ
ಜಿಂಬಾಬ್ವೆ : ಮುಗಾಬೆ ಸಭೆಗೆ ಮೊರ್ಗಾನ್
ಮಾರಿಯಟ್ ಬ್ಲಾಸ್ಟ್: 4 ಮಂದಿ ಬಂಧನ
ವೈಮಾನಿಕ ದಾಳಿಯಲ್ಲಿ 25 ಕುರ್ದಿಶ್ ಉಗ್ರರ ಸಾವು
ಜೋರ್ಡಾನ್- ದಕ್ಷಿಣ ಕೊರಿಯಾ ಅಣುಬಂಧಕ್ಕೆ ಸಹಿ
ಭಾರತಕ್ಕೆ ಪ್ರಥಮ ಆದ್ಯತೆ: ಒಬಾಮಾ