ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಲಿ ಸ್ಫೋಟ: 3 ಉಗ್ರರಿಗೆ ಗಲ್ಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಲಿ ಸ್ಫೋಟ: 3 ಉಗ್ರರಿಗೆ ಗಲ್ಲು
2002ರಲ್ಲಿ ನಡೆದ ಭೀಕರ ಬಾಲಿ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾದ ಮ‌ೂವರು ಇಸ್ಲಾಮಿಕ್ ಉಗ್ರಗಾಮಿಗಳಿಗೆ ನವೆಂಬರ್‌ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗುವುದೆಂದು ಪ್ರಾಸಿಕ್ಯೂಟರ್ ಶುಕ್ರವಾರ ತಿಳಿಸಿದರು.

2002ರಲ್ಲಿ ಬಾಲಿಯಲ್ಲಿ ನಡೆದ ಈ ಬಾಂಬ್ ದಾಳಿಯಲ್ಲಿ 202 ಮಂದಿ ಸಾವನ್ನಪ್ಪಿದ್ದರು. ಆರೋಪಿಗಳಾದ ಇಮಾಮ್ ಸಾಮುದ್ರ, ಅಮ್‌ರೊಜಿ ನೂರ್‌ಹಾಸಿಮ್ ಮತ್ತು ಆಲಿ ಗ್ರೂಫ್ರಾನ್ ಅವರುಗಳಿಗೆ ಇನ್ಯಾವುದೇ ಕಾನೂನು ಆಯ್ಕೆಗಳು ಇಲ್ಲ ಎಂದು ಇಂಡೋನೇಷ್ಯಾ ಅಟಾರ್ನಿ ಜನರಲ್ ಅವರ ವಕ್ತಾರರಾದ ಜಾಸ್ಮನ್ ಪಂಜೈತನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

2002 ಅಕ್ಟೋಬರ್ 12ರಂದು ಬಾಲಿ ದ್ವೀಪದ ಎರಡು ಪ್ರಮುಖ ವಿಹಾರಧಾಮದ ನೈಟ್‌ಕ್ಲಬ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಯೋಜನೆಯನ್ನು ರೂಪಿಸಿರುವುದು ಮತ್ತು ದಾಳಿಗೆ ಸಹಕರಿಸಿರುವುದಕ್ಕಾಗಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ದುರ್ಘಟನೆಯಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ 202 ಮಂದಿ ಸಾವನ್ನಪ್ಪಿದ್ದರು.

ಇಂತಹ ಭೀಕರ ಕೃತ್ಯಗಳನ್ನು ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲು ಸರಕಾರ ಹಿಂಜರಿಯುವುದಿಲ್ಲವೆಂದು ಇಂಡೋನೇಷ್ಯಾದ ಉಪರಾಷ್ಟ್ರಪತಿ ಜುಸಫ್ ಕಲ್ಲಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಡೋನೇಷ್ಯಾ ವಿಶ್ವದ ಅತೀ ದೊಡ್ಡ ಮುಸ್ಲಿಮ್ ರಾಷ್ಟ್ರವಾಗಿದ್ದು, ಇತ್ತೀಚೆಗೆ ನೂರಾರು ಉಗ್ರರ ವಿರುದ್ಧ ಯಾವುದೇ ಹಿಂಜರಿಕೆಯಿಲ್ಲದೆ ಕ್ರಮ ಕೈಗೊಂಡಿರುವುದ್ದಕ್ಕೆ ಪ್ರಶಂಸಗೆ ಪಾತ್ರವಾಗಿದೆ.

2002 ಬಾಲಿ ಆತ್ಮಾಹುತಿ ದಾಳಿಯ ನಂತರ ಇಂಡೋನೇಷ್ಯಾ ಪೊಲೀಸರು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಉತ್ತರ ಜಕಾರ್ತ ಬಳಿಯಲ್ಲಿರುವ ಬೃಹತ್ಪ್ರಮಾಣದ ಇಂಧನದ ಶೇಖರಣಾಗಾರವನ್ನು ಸ್ಫೋಟಿಸಲು ಒಳಸಂಚು ನಡೆಸಿದ್ದ ಐದು ಶಂಕಿತ ಉಗ್ರಗಾಮಿಗಳನ್ನು ಮಂಗಳವಾರದಂದು ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ-ಪಾಕ್:ಶಂಕಿತ ಉಗ್ರರ ಹೆಸರು ವಿನಿಮಯ
ಬೀಜಿಂಗ್:ಸಿಂಗ್- ಗಿಲಾನಿ ಮಾತುಕತೆ
ಐಎಸ್ಐ ವರಿಷ್ಠ ಅಮೆರಿಕಕ್ಕೆ ಭೇಟಿ
ಜಿಂಬಾಬ್ವೆ : ಮುಗಾಬೆ ಸಭೆಗೆ ಮೊರ್ಗಾನ್
ಮಾರಿಯಟ್ ಬ್ಲಾಸ್ಟ್: 4 ಮಂದಿ ಬಂಧನ
ವೈಮಾನಿಕ ದಾಳಿಯಲ್ಲಿ 25 ಕುರ್ದಿಶ್ ಉಗ್ರರ ಸಾವು