ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಲಿನ್ ವಿರುದ್ಧ ಚಾವೇಜ್ ವಾಗ್ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಲಿನ್ ವಿರುದ್ಧ ಚಾವೇಜ್ ವಾಗ್ದಾಳಿ
ಕರಾಕಸ್ : ಅಮೆರಿಕದ ಉಪಾಧ್ಯಕ್ಷ ಚುನಾವಣೆಯ ಅಭ್ಯರ್ಥಿ ಸಾರಾ ಪಾಲಿನ್ ತಮ್ಮನ್ನು ಸರ್ವಾಧಿಕಾರಿಯೆಂದು ಟೀಕಿಸಿರುವುದು ಅವರ ಅಜ್ಞಾನವನ್ನು ತೋರಿಸಿರುವುದಾಗಿ ಹ್ಯೂಗೊ ಚಾವೇಜ್ ಎದಿರೇಟು ನೀಡಿದ್ದಾರೆ.

ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪಾಲಿನ್, ಹ್ಯೂಗೊ ಚಾವೇಜ್ ನಂತಹ ಸರ್ವಾಧಿಕಾರಿಗಳು ಅಮೆರಿಕದ ವಿರುದ್ಧ ಮನಬಂದಂತೆ ವರ್ತಿಸುವದನ್ನು ತಡೆಯಲು ಅಂತಹ ರಾಷ್ಟ್ರಗಳಿಗೆ ಸಂಧಾನದ ಮೂಲಕ ಅಥವಾ ನಿರ್ಬಂಧನೆಯಿಂದ ಮತ್ತು ಅಗತ್ಯವಾದಲ್ಲಿ ಒತ್ತಡ ಹೇರಲಾಗುವುದು ಎಂದು ಹೇಳಿಕೆ ನೀಡಿದ್ದರು.

ಜಲವಿದ್ಯುತ್ ಘಟಕವನ್ನು ಉದ್ಘಾಟಿಸಲು ಆಗಮಿಸಿದ್ದ ಚಾವೇಜ್ ಮಾತನಾಡಿ, ಅವಳ ದಯನೀಯ ಸ್ಥಿತಿಗೆ ನೀವು ಕ್ಷಮೆ ಕೋರಬೇಕು. ಪಾಲಿನ್ ಸೌಂದರ್ಯ ರಾಣಿಯಾಗಿದ್ದರಿಂದ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಹೊರತು ಅರ್ಹತೆಯಿಂದಲ್ಲ ಎಂದು ವ್ಯಂಗವಾಡಿದರು.

ಕ್ರಿಸ್ತನಂತೆ ಅವಳು ಹೇಳಿರುವುದನ್ನು ಅವಳೇ ತಿಳಿದುಕೊಳ್ಳುವಂತೆ ಕ್ಷಮಿಸಿಬಿಡಿ ಎಂದು ಹ್ಯೂಗೊ ಚಾವೇಜ್ ಪಾಲಿನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜಾನ್‌ಮೆಕೈನ್, ಉಪಾಧ್ಯಕ್ಷ ಸ್ಥಾನಕ್ಕೆ ಸಾರಾ ಪಾಲಿನ್ ಅವರನ್ನು ಆಯ್ಕೆ ಮಾಡಿರುವುದು ಅವಳ ಅರ್ಹತೆಯ ಬಗ್ಗೆ ಅಮೆರಿಕದ ಜನತೆಯಲ್ಲಿ ಆಶ್ಚರ್ಯ ಮೂಡಿಸಿದೆ ಎಂದು ಹೇಳಿದ ಚಾವೇಜ್ ಹೇಳಿಕೆಗೆ ಮೆಕೈನ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀಲಂಕಾ ಪ್ರವಾಹ:76 ಸಾವಿರ ಜನರು ಅತಂತ್ರ
ಬಾಲಿ ಸ್ಫೋಟ: 3 ಉಗ್ರರಿಗೆ ಗಲ್ಲು
ಭಾರತ-ಪಾಕ್:ಶಂಕಿತ ಉಗ್ರರ ಹೆಸರು ವಿನಿಮಯ
ಬೀಜಿಂಗ್:ಸಿಂಗ್- ಗಿಲಾನಿ ಮಾತುಕತೆ
ಐಎಸ್ಐ ವರಿಷ್ಠ ಅಮೆರಿಕಕ್ಕೆ ಭೇಟಿ
ಜಿಂಬಾಬ್ವೆ : ಮುಗಾಬೆ ಸಭೆಗೆ ಮೊರ್ಗಾನ್